ಮಸೀದಿಯಲ್ಲಿ ನಡೆದ ಹರಾಜಿನಲ್ಲಿ 2.26 ಲಕ್ಷ ರೂ.ಗೆ ಮಾರಾಟವಾದ ಒಂದು ಮೊಟ್ಟೆ
ಜಮ್ಮು ಮತ್ತು ಕಾಶ್ಮೀರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಣದಲ್ಲಿ ಮಸೀದಿ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಡಳಿತ ಸಮಿತಿಯು ಹಮ್ಮಿಕೊಂಡಿದ್ದ ಹರಾಜಿನಲ್ಲಿ ಮೊಟ್ಟೆಯೊಂದು ₹2.26 ಲಕ್ಷ ಮೊತ್ತ ಸಂಗ್ರಹಿಸಿದೆ.
ಶ್ರೀನಗರದಿಂದ 55 ಕಿಲೋಮೀಟರ್ ದೂರದಲ್ಲಿರುವ ಸೋಪೋರ್‌ನ ಮಲ್ನೋರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಸೀದಿ ನಿರ್ಮಾಣಕ್ಕೆ ಸಮಿತಿಯು ನಗದು ಮತ್ತು ವಸ್ತುವಿನ ರೂಪದಲ್ಲಿ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿತ್ತು. ಈ ವೇಳೆ ಮಹಿಳೆಯೊಬ್ಬರು ಕೋಳಿಮೊಟ್ಟೆಯನ್ನು ದೇಣಿಗೆಯಾಗಿ ಕೊಟ್ಟಿದ್ದರು.




