ಟಿವಿ ನೋಡುವ ವಿಚಾರಕ್ಕೆ ನಡೆದ ಜಗಳ: 17 ವರ್ಷದ ಮಗಳನ್ನು ಬ್ಯಾಟ್‌ನಿಂದ ತಲೆಗೆ ಹೊಡೆದು ಹತ್ಯೆಗೈದ ತಂದೆ
ಸತಾರಾ: ಟಿವಿ ನೋಡುವ ವಿಚಾರಕ್ಕೆ ನಡೆದ ಜಗಳದ ಬಳಿಕ ತಂದೆಯೊಬ್ಬರು ತಮ್ಮ 17 ವರ್ಷದ ಮಗಳನ್ನು ಕ್ರಿಕೆಟ್ ಬ್ಯಾಟ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ.
ಕೊಲೆಯಾದ ಬಾಲಕಿಯನ್ನು ಆರ್ಯಾ ಕದಮ್ (17) ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಆರ್ಯಾ ಕಡಮ್ ಟಿವಿ ನೋಡುತ್ತಿದ್ದಾಗ, ಆಕೆಯ ಕಿರಿಯ ಸಹೋದರ ಟಿವಿ ಬಂದ್ ಮಾಡಿದ್ದ. ಇದರಿಂದ ಕೋಪಗೊಂಡ ಆರ್ಯಾ ಸಹೋದರ ಹಾಗೂ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದಾಳೆ.
ಇದನ್ನು ಕಂಡ ತಂದೆ ಪುರುಷೋತ್ತಮ್ ಕಡಮ್ (47) ಮಗಳನ್ನು ಗದರಿಸಿದ್ದಾರೆ, ಇದರಿಂದ ಕೋಪಗೊಂಡ ಆಕೆ ತಂದೆಯ ಮೇಲೆಯೇ ಬ್ಯಾಟ್‌ನಿಂದ ದಾಳಿಗೆ ಮುಂದಾಗಿದ್ದಾಳೆ. ಈ ವೇಳೆ ಸಿಟ್ಟಿಗೆದ್ದ ತಂದೆ ಆಕೆಯ ಕೈಯಿಂದ ಬ್ಯಾಟ್ ಕಿತ್ತುಕೊಂಡು ಆಕೆಯ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ






