ಮಕ್ಕಳಾಗದ ವಿಚಾರಕ್ಕೆ ಗಲಾಟೆ: ಪತ್ನಿಯನ್ನೇ ಕೊಲೆಗೈದ ಪತಿ
ಕಲಬುರಗಿ: ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ ಮಾಡಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಪತಿ ಮುಂದಾಗಿದ್ದ.
ಚಿಂಚೋಳಿ ಪಟ್ಟಣದ ಪ್ರಿಯಾಂಕಾ ಹಡಪದ್ (30) ಮೃತಪಟ್ಟ ಮಹಿಳೆ. ಸೂರ್ಯಕಾಂತ್ ವಕೀಲ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ.






