ಕುಗ್ರಾಮದ 15 ಮಸೀದಿಗಳಲ್ಲಿ ಮಾಸಪೂರ್ತಿ ರಂಝಾನ್ ಇಫ್ತಾರ್ : ಇಫ್ತಾರ್ ನಲ್ಲಿ ಮಸೀದಿಗೆ ಬಾರದ ಊರುಗಳಲ್ಲಿ ದಾನಿಗಳ ಸಹಕಾರದಲ್ಲಿ ಎಂ.ಫ್ರೆಂಡ್ಸ್ ಸೌಲಭ್ಯ
Middle Eastern Suhoor or Iftar meal
ರಂಝಾನ್ ಸಂದರ್ಭ ಜಿಲ್ಲೆಯ ಮೂಲೆ ಮೂಲೆಗಳಲ್ಲಿ, ಕಾಡು ಮೇಡು ಹತ್ತಿ ಬಡ ಅಶಕ್ತರ ಮನೆ ಸಂದರ್ಶಿಸಿ ಮಗ್ರಿಬ್ ಸಮಯ ಕುಗ್ರಾಮದ ಮಸೀದಿಗಳಿಗೆ ತೆರಳಿದರೆ ಒಂದು ತುಂಡು ಖರ್ಜೂರ ಮತ್ತು ನೀರಿನ ವ್ಯವಸ್ಥೆ ಕೊಡುವ ಆರ್ಥಿಕ ದೃಢತೆ ಅಲ್ಲಿರುವುದಿಲ್ಲ. ಇದನ್ನು ಮನಗಂಡ ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಹನೀಫ್ ಹಾಜಿ ಮತ್ತು ತಂಡ ಇಂತಹ ಕುಗ್ರಾಮಗಳ ಮಸೀದಿಗಳಿಗೆ ಮಾಸಪೂರ್ತಿ ಇಫ್ತಾರ್ ಆಯೋಜಿಸಲು ತೀರ್ಮಾನಿಸಿ ಪ್ರತಿವರ್ಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವರ್ಷ ಕಳೆದಂತೆ ಮಸೀದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ವರ್ಷ 15 ಮಸೀದಿಗಳಲ್ಲಿ ಇಫ್ತಾರ್ ಸೌಲಭ್ಯಕ್ಕೆ ಒಂದು ಮಸೀದಿಗೆ ಪ್ರತಿದಿನ 1,000/- ದಂತೆ ಮಾಸಿಕ ತಲಾ 30,000/- ರೂ. ನೀಡಲಾಗುತ್ತಿದೆ.
ಬಂಟ್ವಾಳ ತಾಲೂಕಿನ ಪುಲಾಬೆ (ಸಿದ್ದಕಟ್ಟೆ) ಮಸೀದಿ ಇಫ್ತಾರಿಗೆ ಝಕರಿಯಾ ಜೋಕಟ್ಟೆ, ಮಂಕುಡೆ ಲೋಕಿಮೂಲೆ ಮಸೀದಿಗೆ ತುಫೈಲ್ ಅಹ್ಮದ್, ಕಡೇಶ್ವಾಲ್ಯದ ಮೀಯಾರ್ ಪಳಿಕೆ ಮಸೀದಿಗೆ ಹನೀಫ್ ಹಾಜಿ ಗೋಳ್ತಮಜಲು ಮತ್ತು ಸಹೋದರರು, ಬೆಂಜನಪದವು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತನ್ವೀರ್ ಅಹ್ಮದ್, ಕಡಬದ ಪೇರಡ್ಕ ಮಸೀದಿಗೆ ಶರೀಫ್ ವೈಟ್ ಸ್ಟೋನ್, ನೆಲ್ಯಾಡಿಯ ಪಡುವೆಟ್ಟುಗೆ ಮನ್ಸೂರ್ ಆಝಾದ್, ಪುತ್ತೂರಿನ ಹಳೇನೇರಂಕಿ ಮಸೀದಿಗೆ ಯೂನುಸ್ ಹಸನ್, ಬೆಳ್ತಂಗಡಿಯ ಪಟ್ರಮೆ ಮಸೀದಿಗೆ ಮುಹ್ಸಿನ್, ಬೆಳ್ತಂಗಡಿಯ ಬೊಳ್ಮಿನಾರ್ ಮಸೀದಿಗೆ ಶೌಕತಲಿ, ಮೂಡಬಿದಿರೆಯ ಮಿಜಾರ್ ಮಸೀದಿಗೆ ಎಸ್ಸೆಂ ಮುಸ್ತಫಾ, ಮೂಡಬಿದ್ರೆಯ ಮಕ್ಕಿ ಮತ್ತು ಕೆಳದಪೇಟೆಗೆ ಆಸಿಫ್ ಅಮಾಕೋ, ಕಾಜೂರಿನ ಪೆರ್ದಡಿ ಮಸೀದಿಗೆ ಸಲೀಮ್ ಮೊಬೈಲ್ ಕೇರ್ ಮತ್ತು ಸಮೀರ್ ಪುತ್ತೂರು ಇಫ್ತಾರ್ ಪ್ರಾಯೋಜಕರಾಗಿ ಸಹಕರಿಸಿದ್ದಾರೆ. ಹಕೀಂ ಕಲಾಯಿ, ಇಸ್ಮಾಯಿಲ್ ನೆಲ್ಯಾಡಿ, ಕಲಂದರ್ ಪರ್ತಿಪಾಡಿ, ಕೆಎಸ್ ಅಬೂಬಕರ್, ಸಿದ್ದೀಕ್ ನೀರಾಜೆ ಆಯಾಯ ಪ್ರದೇಶಗಳ ಕಾರ್ಯನಿರ್ವಾಹಕರಾಗಿ ಸಹಕಾರ ನೀಡಿದ್ದಾರೆ.
ಪೇಟೆ ಪಟ್ಟಣ ಪ್ರದೇಶಗಳಲ್ಲಿ ಬಗೆಬಗೆಯ ವೈಶಿಷ್ಟ್ಯಪೂರ್ಣ ಇಫ್ತಾರ್ ಕೂಟ ನಡೆಯುವಾಗ ಕುಗ್ರಾಮದ ಪ್ರದೇಶದ ಮಸೀದಿಗಳು ಮಗ್ರಿಬ್ ಸಮಯ ಜನರಿಲ್ಲದೇ ಕೊರಗಬಾರದೆಂಬ ನೆಲೆಯಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
-ರಶೀದ್ ವಿಟ್ಲ.






