August 27, 2026

ಕಾರವಾರ: ರಸ್ತೆ ಬದಿಯಲ್ಲಿದ್ದ ಮಗು ಸೇರಿ ಐವರು ಕಾರ್ಮಿಕರ ಮೇಲೆ ಹರಿದ ಕಾರು

0
image_editor_output_image550049044-1712709706364.jpg

ಕಾರವಾರ: ಅತಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ವಿಶ್ರಾಂತಿ ಪಡೆಯುತಿದ್ದ ಮಗು ಸೇರಿ ಐವರು ಕಾರ್ಮಿಕರ ಮೇಲೆ ಹರಿದ ಘಟನೆ ಶಿರಸಿಯ ಹಿಪ್ನಳ್ಳಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮಗು ಮತ್ತು ಕಾರ್ಮಿಕನೊಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಶಿರಸಿಯಿಂದ ಕುಮಟಾ ಕಡೆ ಹೋಗುತ್ತಿದ್ದ ಡಸ್ಟರ್ ಕಾರು, ರಸ್ತೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹರಿದಿದೆ. ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದ ಪರಿಣಾಮ ಈ ಅಪಘಾತ ನಡೆದಿದೆ ಎಂದು ಆರೋಪಿಸಲಾಗಿದೆ.

ಗಾಯಾಳುಗಳು ಹೈದರಾಬಾದ್ ಮೆಹಬೂಬ್ ನಗರದ ಕಾರ್ಮಿಕರು ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ಮಗು ಸೇರಿ ಐದು ಜನರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!