ಕೊಡಂಗಾಯಿ ಶಾಖೆ SKSSF ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ:26-06-2026
ವಿಟ್ಲ, ಕೊಡಂಗಾಯಿ: ವಿಶ್ವ ವಿಖ್ಯಾತ ಉಲಮಾ ಸಂಘಟನೆ “ಸಮಸ್ತ” ಇದರ 101ನೇ ಸ್ಥಾಪಕ ದಿನಾಚರಣೆ ಶಾಖಾ ಅಧ್ಯಕ್ಷರಾದ ಹನೀಫ್ ಪಿ ಅಧ್ಯಕ್ಷತೆ ಯಲ್ಲಿ ನಡೆಯಿತು.
ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಮೇಲಂಗಡಿ ಧ್ವಜಾರೋಹಣ ನೆರವೇರಿಸಿದರು.
ಕೆ ಎಂ ಎ ಫಾಝಿಲ್ ಹನೀಫಿ ಕೊಡುಂಗಾಯಿ ದುಆ ನಡೆಸಿ
ನೂರು ವರುಷ ಕಳೆದರು ಸಮಸ್ತ ಯಾವ ಉದ್ದೇಶಕ್ಕೆ ರೂಪೀಕರಿಸಲಾಗಿದೆಯೊ ಅದೇ ಅಹ್ಲುಸ್ಸುನ್ನತ್ ವಲ್ ಜಮಾಅತಿನ ಆಶಯ ಆದರ್ಶದಲ್ಲಿ ‘ಸಮಸ್ತ’ ದ ನಿಲುವು ಅಚಲ ಎಂದು ಸಂಕ್ಷಿಪ್ತವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ
ಸಾಬಿತ್ ಎಂ, ಅಬ್ದುಲ್ಲ ಕುಂಞ ಎಂ ಎಚ್,
ಎ ಎಂ ಮಹಮ್ಮದ್ ಕುಂಞ,ಕಾದರ್ ಟಿ ಎಂ, ಅಲೀಮುಲ್ಲಾ,ಅಬೂಬಕರ್ ಎಂ,ಹಸನ್ ಬಿ,
ಅಬೂಬಕರ್ ಪಿ,ಅಬ್ದುಲ್ಲ ಎಂ,ಉಸ್ಮಾನ್ ಅಂಗಡಿ
ಮತ್ತು ಸಮಸ್ತ ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಬ್ರಾಹಿಂ ಝೈನಿ ಸ್ವಾಗತಿಸಿ ಮಜೀದ್ ಟಿ ಎಂ ವಂದಿಸಿದರು.




