ವಿಟ್ಲ :ಡಿ’ ಗ್ರೂಪ್ ವತಿಯಿಂದ ಇಫ್ತಾರ್ ಕೂಟ ಹಾಗೂ ಈದ್ ಸಂದೇಶ.
ವಿಟ್ಲ; ಡಿ’ ಗ್ರೂಪ್ (ರಿ) ವಿಟ್ಲ ಇದರ ವತಿಯಿಂದ ವಿಟ್ಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ಬೃಹತ್ ಇಫ್ತಾರ್ ಕೂಟ ಹಾಗೂ ಈದ್ ಸಂದೇಶ ಕಾರ್ಯಕ್ರಮ ನಡೆಯಿತು. ಡಿ” ಗ್ರೂಪ್ ನ ಅಧ್ಯಕ್ಷ ವಿ.ಎಚ್ .ರಿಯಾಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ದುವಾದ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ಕೊಟ್ಟ ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಈದ್ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಹೊಪ್ ಫೌಂಡೇಶನ್ ಆಫ್ ಇಂಡಿಯಾದ ಸ್ಥಾಪಾಧ್ಯಕ್ಷ ಸೈಫ್ ಸುಲ್ತಾನ್ ಸೈಯೀದ್ ,ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಝುಬೈರ್ ಮಾಸ್ಟರ್, ಕಾರ್ಯದರ್ಶಿ ನೋಟರಿ ಅಬೂಬಕರ್ ,ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು,ಕೋಷ್ಟಲ್ ಫ್ರೆಂಡ್ಸ್ ನ ಸ್ಥಾಪಕಾಧ್ಯಕ್ಷ ಶರೀಫ್ ವಳಾಲು ,ಡ್ರೀಮ್ಸ್ ಅಸೋಸಿಯೇಟ್ ನ ಝುಬೈರ್ ಬುಳ್ಳೇರಿಕಟ್ಟೆ,,ಡಿ’ ಗ್ರೂಪ್ ನ ಗೌರವಾಧ್ಯಕ್ಷ ಅಝೀಝ್ ಸನ, ನಿಕಟಪೂರ್ವ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ, ವಿಟ್ಲ ಜಮಾಅತ್ ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟ್ಟು ಮುಂತಾದವರು ವೇದಿಕೆಯಲ್ಲಿದ್ದರು.
ಡಿ ಗ್ರೂಪ್ ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಡಿ ‘ ಗ್ರೂಪ್ ನ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಸ್ವಾಗತಿಸಿದರು.
ಮಾಧ್ಯಮ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ನಿರೂಪಿಸಿದರು.









