ಮಂಗಳೂರು: ರೈಲಿ ನಡಿಗೆ ಬಿದ್ದು ಯುವಕ ಮೃತ್ಯು
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಗುತ್ತಿಗಾರಿನ ಯುವಕನೋರ್ವ ಮಂಗಳೂರಿನಲ್ಲಿ ರೈಲಿ ನಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಯುವಕ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಚನಿಲ ನಿವಾಸಿ ಸುಪ್ರೀತ್ ನಾಯ್ಕ ಎಂದು ಗುರುತಿಸಲಾಗಿದೆ.
ಆಕಸ್ಮಿಕವಾಗಿ ರೈಲಿ ನಡಿಗೆ ಬಿದ್ದು ಮೃತಪಟ್ಟಿರಬಹುದೆಂದು ಸಂಶಯ ಪಡಲಾಗಿದೆ .ನಿಖರ ಕಾರಣ ಪೊಲೀಸರ ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ.





