ಕರಾವಳಿಯಲ್ಲಿ ಕೋಳಿಮಾಂಸದ ದರದಲ್ಲಿ ಏರಿಕೆ
ಮಂಗಳೂರು: ಕರಾವಳಿಯಲ್ಲಿ ಕೋಳಿಮಾಂಸಕ್ಕೆ ಬೇಡಿಕೆ ಹೆಚ್ಚಾಗಿ ಇದೆ. ಕೆ.ಜಿಗೆ 30 ರಿಂದ 40 ರೂ. ಹೆಚ್ಚಾಗಿದೆ. ಕೆಲವು ಕಡೆ ಬಾಯ್ಲರ್ ಕೋಳಿ(ವಿದ್ ಸ್ಕಿನ್) ಕೆ.ಜಿಗೆ 235- 245 ರೂಪಾಯಿ ವರೆಗೆ ಇದ್ದ, ಟೈಸನ್ ಕೋಳಿಗೆ 270 ರೂಪಾಯಿ ಇದೆ.
ವಿದೌಟ್ ಸ್ಕಿನ್ ಮಾಂಸಕ್ಕೆ 265 ರಿಂದ 270 ರೂಪಾಯಿ ತನಕ ಇದೆ. ಒಂದು ವಾರದಲ್ಲಿ ಕೋಳಿ ಮಾಂಸದ ದರ ಏರಿಕೆ ಕಂಡಿದ್ದು, ಪ್ರತಿದಿನ ಅಥವಾ 2-3 ದಿನಗಳಿಗೆ 5-6 ರೂಪಾಯಿ ಹೆಚ್ಚಾಗುತ್ತಿದೆ.
ಈ ಬಾರೀಯ ಬಿಸಿಲಿನಿಂದಾಗಿ ಕೋಳಿಗಳಿಗೆ ಬೇಕಾದ ಆಹಾರವಾದ ಸೋಯಾ, ಜೋಳ, ಫಸಲು ಸಿಗುತ್ತಿಲ್ಲ. ನೀರಿನ ಕೊರತೆ ಹಾಗೂ ಸುಡು ಬಿಸಿಲಿನ ಆವೇಗಕ್ಕೆ ಶೇ. 20-25 ರಷ್ಟು ಕೋಳಿ ಸಾಕಾಣಿಕೆ ಕೇಂದ್ರಗಳು ಮುಚ್ಚಿವೆ. ಒಂದೆಡೆ ರಮಝಾನ್, ಕೋಲ, ಅಗೆಲು ಸೇವೆ, ಮದುವೆ, ಔತಣ, ಸೀಮಂತ ಹೀಗೆ ಇನ್ನೀತರ ಕಾರ್ಯಕ್ರಮಗಳು ಹೆಚ್ಚಾಗಿರುವ ಕಾರಣ ಬೇಡಿಕೆ ಹೆಚ್ಚಾಗಿ ಇದೆ. ಬಿಸಿಲು ಕೂಡ ಹೆಚ್ಚಾಗಿರುವ ಕಾರಣ ಕೋಳಿಯ ಬೆಳವಣಿಗೆದ ತೊಂದರೆ ಆಗುತ್ತಿದೆ.





