ಮಂಗಳೂರು: ನಾನು ಬ್ರಾಹ್ಮಣ ಆಗಿದ್ದಿದ್ರೆ ನಿಸ್ಸಂದೇಹವಾಗಿ ಟಿಕೆಟ್ ಸಿಗುತ್ತಿತ್ತು: ಸತ್ಯಜೀತ್ ಸುರತ್ಕಲ್
ಮಂಗಳೂರು: ನಾನು ಬ್ರಾಹ್ಮಣ, ಬಿಲ್ಲವ, ಒಕ್ಕಲಿಗ ಆಗಿದ್ದಿದ್ರೆ ನಿಸ್ಸಂದೇಹವಾಗಿ ಟಿಕೆಟ್ ಅವಕಾಶ ಸಿಕ್ತಿತ್ತು. ನಿಯತ್ತಿನ ರಾಜಕೀಯಕ್ಕೆ ಈಗಿನ ಕಾಲದಲ್ಲಿ ಬೆಲೆ ಇಲ್ಲ. ನಾಯಕರು ಹೇಳಿದ ಹಾಗೆ ಬಕೆಟ್ ಹಿಡಿದವರಿಗೆ ಮಾತ್ರ ಬೆಲೆಯಿದೆ ಎಂದು ಸಂಘಪರಿವಾರದ ಕಾರ್ಯಕರ್ತ ಸತ್ಯಜೀತ್ ಸುರತ್ಕಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಬಿಜೆಪಿ ಟಿಕೆಟ್ ಗಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದೆ, ಆದರೆ ಅಭ್ಯರ್ಥಿಯಾಗಿ ಬಿಜೆಪಿ ಯಿಂದ ಬ್ರಿಜೇಶ್ ಚೌಟ ಗೆ ಟಿಕೆಟ್ ನೀಡಿದ್ರು. ಸೂಕ್ತ ಸ್ಥಾನಮಾನಕ್ಕಾಗಿ ನನ್ನ ಬೆಂಬಲಿಗರು ಬೇಡಿಕೆ ಇಟ್ಟಿದ್ದರು. ಘೋಷಣೆಯಾಗಿ ಎರಡು ಮೂರುವಾರ ಕಳೆದಿದೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಬಿಜೆಪಿ ವರಿಷ್ಠರು ಹಲವು ಬಾರಿ ಸಮಯವಕಾಶ ಕೇಳಿದ್ರು ಆದರೆ ಯಾವುದೇ ಬೆಳವಣಿಗೆಯಾಗಿಲ್ಲ ಆದ್ದರಿಂದ ಟೀಂ ಸತ್ಯಜಿತ್ ಸುರತ್ಕಲ್ ಹಾಗೆಯೇ ಮುಂದುವರೆಯುತ್ತೆ ಎಂದು ಸ್ಪಷ್ಟಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಲ್ಲವ ಸಮುದಾಯದ ಎಲ್ಲಾ ಅಭ್ಯರ್ಥಿಗಳನ್ನು ನಾರಾಯಣಗುರು ವಿಚಾರ ವೇದಿಕೆ ಪಕ್ಷತೀತವಾಗಿ ಬೆಂಬಲಿಸಲಿದೆ ಎಂದು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ತಿಳಿಸಿದ್ದಾರೆ.





