September 19, 2024

ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಪ್ರಕಟ

0

ಬ್ಯಾಂಕಾಕ್: ಮ್ಯಾನ್ಮಾರ್ ನ ಉಚ್ಟಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಮತ್ತು ಮಿಲಿಟವಿ ವಿರುದ್ಧ ಭಿನ್ನಾಭಿಪ್ರಾಯ ಮೂಡಿಸುತ್ತಿರುವ ಆರೋಪದ ಮೇರೆಗೆ ಆನ್ ಸಾನ್ ಸೂಕಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯನ್ನು ಮ್ಯಾನ್ಮಾರ್ ನ್ಯಾಯಾಲಯವೊಂದು ನೀಡಿದೆ.

ಸೆಕ್ಷನ್ 505 (ಬಿ) ಅಡಿಯಲ್ಲಿ ಆಂಗ್ ಸಾನ್ ಸೂಕಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ವಾಭಾವಿಕ ವಿಪತ್ತು ಕಾನೂನು ಅಡಿಯಲ್ಲಿ ಮತ್ತೆರಡು ವರ್ಷ ಜೈಲು ಶಿಕ್ಷೆಗೆ ಅವರು ಒಳಗಾಗಿದ್ದಾರೆ ಎಂದು ಜುಂಟಾ ಲಕ್ತಾರ ಝವ್ ಮಿನ್ ತುನ್ ಹೇಳಿದ್ದಾರೆ.

ಸಾರ್ವಜನಿಕ ಆಶಾಂತಿಗೆ ಕಾರಣವಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ನವೆಂಬರ್ 30 ರಂದು ವಿಚಾರಣೆ ನಡೆಸಿದ್ದ ಮ್ಯಾನ್ಮಾರ್ ನ್ಯಾಯಾಲಯ ಮೊದಲ ಪ್ರಕರಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

Leave a Reply

Your email address will not be published. Required fields are marked *

error: Content is protected !!