ವಿಟ್ಲ; ವೈನ್ಸ್ ಶಾಪ್ ಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಮಾರಣಾಂತಿಕ ಹಲ್ಲೆ:
ಇಬ್ಬರ ಮೇಲೆ ಪ್ರಕರಣ ದಾಖಲು
ವಿಟ್ಲ: ವೈನ್ ಶಾಪ್ ಗೆ ಹೋಗಿ ಹಿಂತಿರುಗಿ ಬರುತ್ತಿದ್ದ ವೇಳೆ ಇಬ್ಬರು ವ್ಯಕ್ತಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು,ಹಲ್ಲೆ ಗೈದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿ ವ್ಯಕ್ತಿಯೊಬ್ಬರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಕೇಪು ಗ್ರಾಮದ ಕಂಬಳದಡ್ಡ ನಿವಾಸಿ ರುಕ್ಮ ಎನ್ನುವವರು ನೀಡಿದ ದೂರಿನ ಮೇರೆಗೆ ಲಿಂಗಪ್ಪ ಶೆಟ್ಟಿ ಮತ್ತು ಲಕ್ಷ್ಮೀಶ ಎಂಬವರ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರುಕ್ಮ ರವರು ವೈನ್ ಶಾಪ್ ಗೆ ತೆರಳಿ ಮಧ್ಯ ಖರೀದಿಸಿ ಹಿಂತಿರುಗುತ್ತಿದ್ದ ವೇಳೆ ಅವರನ್ನು ಅಡ್ಡ ಗಟ್ಟಿದ ಲಿಂಗಪ್ಪ ಶೆಟ್ಟಿ ಮತ್ತು ಲಕ್ಷ್ಮೀಶ ಅವಾಚ್ಯ ಶಬ್ದಗಳಿಂದ ಬೈದು, ಜಲ್ಲಿ ಕಲ್ಲಿನಿಂದ ಕಣ್ಣಿಗೆ ಭಾಗಕ್ಕೆ ಹೊಡೆದಿದ್ದು, ಇನ್ನು ಮುಂದಕ್ಕೆ ನರೇನ ವೈನ್ಸ್ ಗೆ ಬಂದರೆ ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





