ಕನ್ಸರ್ಟ್ ಹಾಲ್ ಮೇಲೆ ಬಂದೂಕುಧಾರಿಗಳಿಂದ ದಾಳಿ: 40ಕ್ಕೂ ಹೆಚ್ಚು ಮಂದಿ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ
ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಕನ್ಸರ್ಟ್ ಹಾಲ್ ಮೇಲೆ ಹಲವು ಬಂದೂಕುಧಾರಿಗಳು ನುಗ್ಗಿ ದಾಳಿ ನಡೆಸಿದ್ದು ಘಟನೆಯಲ್ಲಿ 40 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, 100 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ರಷ್ಯಾದಲ್ಲಿ ಪುಟಿನ್ ಮರು ಆಯ್ಕೆಯಾದ ಬೆನ್ನಲ್ಲೇ ಈ ದಾಳಿ ನಡೆದಿದೆ. ಈ ದಾಳಿಗೆ ತಕ್ಷಣಕ್ಕೆ, ಈ ವರೆಗೂ ಯಾರೂ ಹೊಣೆ ಹೊತ್ತುಕೊಂಡಿಲ್ಲ. ಎರಡು ದಶಕಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಇದೊಂದು ಬೃಹತ್ ಅನಾಹುತ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೋಬಯಾನಿನ್ ಹೇಳಿದ್ದಾರೆ.





