ಕಾಸರಗೋಡು: ಬಾಡಿಗೆ ಮನೆಯಲ್ಲಿದ್ದ 7.5 ಕೋಟಿ ರೂ. ವಶಕ್ಕೆ
ಕಾಸರಗೋಡು: ಖಚಿತ ಮಾಹಿತಿ ಮೆರೆಗೆ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರಿಗೆ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿದ್ದು ಸುಮಾರು 7.5 ಕೋಟಿ ವಶಪಡಿಸಿಕೊಂಡಿದ್ದಾರೆ.
ಅಲ್ಲಿ ಸಿಕ್ಕ 2 ಸಾವಿರ ಮುಖಬೆಲೆಯ ನೋಟು ಎಣಿಸಿದ ಪೊಲೀಸರು ಸುಸ್ತಾಗಿ ಹೋಗಿದ್ದಾರೆ.
ಕಾಸರೋಡು ಜಿಲ್ಲೆಯ ಅಂಬಲತ್ತರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದ್ದು, ಪರಪ್ಪಳ್ಳಿ ಎಂಬಲ್ಲಿನ ಬಾಡಿಗೆ ಮನೆಗೆ ಪೊಲೀಸರು ದಾಳಿ ನಡೆಸಿದ್ದರು.
ಮಾಹಿತಿದಾರರೊಬ್ಬರು ಖಚಿತ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಈ ದಾಳಿ ನಡೆಸಿದ್ದರು. ಮಾಹಿತಿದಾರ ನೀಡಿದ ಮಾಹಿತಿ ಖಚಿತವಾಗಿದ್ದು, ದಾಳಿ ನಡೆಸಿದ ಪೊಲೀಸರಿಗೆ ಮನೆಯಲ್ಲಿ ಕಂತೆ ಕಂತೆ ಎರಡು ಸಾವಿರದ ನೋಟುಗಳು ಪತ್ತೆಯಾಗಿದೆ.
ನೋಟುಗಳನ್ನು ಎಣಿಸಿದ ಪೊಲೀಸರು ಸರಿಸುಮಾರು 7.5 ಕೋಟಿಯಷ್ಟು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆದರೆ, ಅಂಬಲತ್ತರದ ಪೊಲೀಸ್ ಪರಪಳ್ಳಿಯ ಬಾಡಿಗೆ ಮನೆಯಲ್ಲಿ ಈ ಹಣ ಪತ್ತೆಯಾಗಿದ್ದು 2000 ಮುಖಬೆಲೆಯ ಈ 7.5 ಕೋಟಿ ಹಣ ಸಂಪೂರ್ಣ ನಕಲಿ ಅನ್ನೋದು ಗೊತ್ತಾಗಿದೆ.





