5 ಪುಟಗಳ ಡೆತ್ ನೋಟ್ ಬರೆದಿಟ್ಟು ಗೃಹಿಣಿ ನೇಣುಬಿಗಿದು ಆತ್ಮಹತ್ಯೆ
ಮಂಡ್ಯ : 5 ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟ ಪ್ರೇಮಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ ತಾನು ಅನುಭವಿಸಿದ ಆ ನೋವಿನ ಕರಾಳ ದಿನಗಳನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟು ಯುವ ಗೃಹಿಣಿ ನೇಣಿಗೆ ಶರಣಾದ ದಾರುಣ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದ 26 ವರ್ಷದ ಪ್ರೇಮಕುಮಾರಿ ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
2022ರಲ್ಲಿ ಮೈಸೂರಿನ ರಾಘವೇಂದ್ರ ಎಂಬುವವರನ್ನು ಪ್ರೇಮಕುಮಾರಿ ಮದುವೆಯಾಗಿದ್ದರು. ಪ್ರೇಮಕುಮಾರಿ ಕುಟುಂಬಸ್ಥರು ಮದುವೆ ಸಂದರ್ಭ 150 ಗ್ರಾಂ ಚಿನ್ನ ಹಾಗೂ 5 ಲಕ್ಷ ರೂ. ನಗದು ಹಣವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು.





