35 ಲಕ್ಷ ರೂ.ಮೌಲ್ಯದ ಪಾನ್ ಮಸಾಲ ವಶಕ್ಕೆ
ಕಲಬುರಗಿ: ಜೇವರ್ಗಿ ತಾಲ್ಲೂಕಿನ ಚಿಗರಳ್ಳಿ ಚೆಕ್‍ಪೋಸ್ಟ್ ಹತ್ತಿರ 35 ಲಕ್ಷ ರೂ.ಮೌಲ್ಯದ ಪಾನ್ ಮಸಾಲಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗ್ರಾಮೀಣ ಉಪ ವಿಭಾಗದ ಎಎಸ್‍ಪಿ ಬಿಂದು ಮಣಿ ಹಾಗೂ ಜೇವರ್ಗಿ ಠಾಣಾ ಪೊಲೀಸ್ ಅಧಿಕಾರಿಗಳು ಚಿಗರಳ್ಳಿ ಚೆಕ್‍ಪೋಸ್ಟ್ ಹತ್ತಿರ ವಾಹನ ತಪಾಸಣೆ ವೇಳೆ ಮಾಡುತ್ತಿದ್ದ ವೇಳೆ 35 ಲಕ್ಷ ರೂ.ಮೌಲ್ಯದ ಪಾನ್ ಮಸಾಲಾ ತುಮಕೂರಿನಿಂದ ಬೀದರಗೆ ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ನಂತರ ಅದನ್ನು ಮುಂದಿನ ಕ್ರಮಕ್ಕಾಗಿ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಎಸ್ಪಿ ಅಕ್ಷಯ ಹಾಕೆ ತಿಳಿಸಿದ್ದಾರೆ.





