ಪುತ್ತೂರು ಪುತ್ತಿಲ ಪರಿವಾರದಲ್ಲಿ ಒಡಕು ಸೃಷ್ಟಿ: ಪರಿವಾರದಿಂದ ಹೊರ ನಡೆದ ರಾಜರಾಮ್ ಭಟ್
ಪುತ್ತೂರು: ಭಾರಿ ನಿರೀಕ್ಷೆ ಇಟ್ಟಿಕೊಂಡಿದ್ದ ಪುತ್ತಿಲ ಪರಿವಾರದಲ್ಲಿ ಒಡಕು ಸೃಷ್ಟಿಯಾಗಿದ್ದು, ಪರಿವಾರದ ಪ್ರಮುಖ ಮುಖಂಡರಾಗಿದ್ದ ರಾಜರಾಮ್ ಭಟ್ ಪುತ್ತಿಲ ಪರಿವಾರದಿಂದ ಹೊರಕ್ಕೆ ನಡೆದು ರಾಜಕೀಯ ನೀವೃತ್ತಿ ಘೋಷಣೆ ಮಾಡಿದ್ದಾರೆ.
ಇವತ್ತಿನಿಂದ ನಾನು ಸ್ವತಂತ್ರ ಮತದಾರ, ನಾನು ಯಾವ ಪರಿವಾರದ, ಸಂಘಟನೆಯ ವಕ್ತಾರನಲ್ಲ. ನಾನು ಇನ್ನು ಮುಂದೆ ಪುತ್ತಿಲ ಪರಿವಾರದ ಸದಸ್ಯನಾಗಿರುವುದಿಲ್ಲ. ತನು-ಮನ-ಧನದಿಂದ ನಾನು ಪರಿವಾರಕ್ಕೆ ಧಾರೆ ಎರೆದಿದ್ದೇನೆ. ವೈಯುಕ್ತಿಕ ಕಾರಣಕ್ಕಾಗಿ ಈ ನಿರ್ಧಾರ ಎಂದು ಹೇಳುವ ಮೂಲಕ ರಾಜಾರಾಮ್ ಭಟ್ ಪರಿವಾರದಿಂದ ಹೊರನಡೆದು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.





