28 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು: ಆಕಾಶವಾಣಿ (ಎಐಆರ್)ಯ ನಿವೃತ್ತ ನಿರ್ದೇಶಕ ಮುನಿಕೃಷ್ಣಪ್ಪ ಅವರ ಮನೆಯಲ್ಲಿ ನರ್ಸಿಂಗ್ ಕೇರ್‌ನಲ್ಲಿ ಮೇಡ್ ಆಗಿ ಕೆಲಸಕ್ಕೆ ಸೇರಿ ಸಂಚು ರೂಪಿಸಿ 28 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಕಳ್ಳತನ ಮಾಡಿದ ಮಹಿಳೆ ಸೇರಿ ಇಬ್ಬರು ಖತರ್ನಾಕ್ ಮಹಿಳೆಯರನ್ನು ಜೆಪಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪಳ ಮೂಲದ ಮಂಜುಳ ಉಜರತ್(೩೦)ಹಾಗೂ ಕನಕಪುರದ ಮನೆಗೆಲಸದ ಮಹಿಳೆ ಮಹದೇವಮ್ಮ(೫೦) ಬಂಧಿತ ಆರೋಪಿಗಳಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು





