ಮಂಗಳವಾರದಿಂದ ಕರಾವಳಿಯಲ್ಲಿ ರಮಝಾನ್ ಉಪವಾಸ ಪ್ರಾರಂಭ
ಮಂಗಳೂರು: ಪವಿತ್ರ ರಮಝಾನ್ ಮಾಸದ ಚಂದ್ರ ದರ್ಶನವಾಗಿರುವುದರಿಂದ ಮಂಗಳವಾರದಿಂದ ಕರಾವಳಿ ಜಿಲ್ಲೆಯಲ್ಲಿ ಉಪವಾಸ ಪ್ರಾರಂಭವಾಗಲಿದೆ.
ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ರಂಝಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರವರ ನಿರ್ದೇಶನದಂತೆ ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಜುಮಾ ಮಸೀದಿಯ ಕೋಶಾಧಿಕಾರಿಯವರಾದ ಹಾಜಿ ಎಸ್.ಎಂ. ರಶೀದ್ ಪ್ರಕಟಣನೆಯಲ್ಲಿ ತಿಳಿಸಿರುತ್ತಾರೆ.





