May 6, 2026

ವಿಟ್ಲ: ಅಂದರ್ ಬಾಹರ್ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: ನಾಲ್ವರು ಆರೋಪಿಗಳ ಬಂಧನ

0
IMG-20220615-WA0046

ವಿಟ್ಲ: ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡು ಕಲ್ಲಿನಕೋರೆಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಭಾನುವಾರ ನಡೆದಿದೆ.

ಧರ್ಮರಾಜ್ , ಗೋಪಾಲ ಯಾನೆ ಚಂದ್ರಶೆಖರ, ವಲಿತ್ ಕೆ, ಕಲಂದರ್ ಶಾಫಿ ಬಂಧಿತ ಆರೋಪಿಗಳು.

ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾಗ, ದಾಳಿ ನಡೆಸಿದ ವಿಟ್ಲ ಪೊಲೀಸ್‌ ಠಾಣಾ ಎಸೈ ವಿದ್ಯಾ ಕೆ ಜೆ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ.

ಸ್ಥಳದಲ್ಲಿದ್ದ ನಗದು ರೂಪಾಯಿ 1550, ಇಸ್ಪಿಟ್‌ ಎಲೆಗಳನ್ನು ಹಾಗೂ ಜುಗಾರಿ ಆಟಕ್ಕೆ ಬಳಸಿದ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!