August 13, 2026

ಕೋಡಪದವು ಶಾಲೆಯಲ್ಲಿ ಯೇನಪೋಯ ಕಾಲೇಜ್ ನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ವಾರ್ಷಿಕ ಶಿಬಿರ

0
image_editor_output_image-943927468-1709728793586

ಬಂಟ್ವಾಳ: ಎನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರಲು ಸಹಕಾರಿಯಾಗುತ್ತದೆ ಮತ್ತು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯ ಜತೆಗೆ ವ್ಯಕ್ತಿವಿಕಸನಕ್ಕೆ ಸಹಾಯ ಮಾಡುತ್ತದೆ ಎಂದು ಬಂಟ್ವಾಳ ತಾಲೂಕಿನ ಪಡ್ನೂರ್ ನ ಕೊಡಪದವು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಉಮ್ಮರ್ ಫಾರೂಕ್ ಹೇಳಿದರು.

ಬಂಟ್ವಾಳ ತಾಲೂಕಿನ ಪಡ್ನೂರ್ ನ ಕೊಡಪದವು ಶಾಲೆಯಲ್ಲಿ ನಡೆದ ಯೆನಪೋಯ ಪದವಿ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಇವರು ಎನ್ ಎಸ್ ಎಸ್ ನಲ್ಲಿ ಭಾಗವಹಿಸಿ ಪಡೆದುಕೊಂಡ ಚಟುವಟಿಕೆಗಳು ವಿದ್ಯಾರ್ಥಿ ಬದುಕಿನ ನಂತರದ ಜೀವನದಲ್ಲಿ ಸಹಕಾರಿಯಾಗುತ್ತದೆ, ವ್ಯಕ್ತಿತ್ವ ವಿಕಸನಕ್ಕೆ, ನಾಯಕತ್ವ ಗುಣವನ್ನು ಎನ್ ಎಸ್ ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ ಎಂದರು.

ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಜೇಂದ್ರ ನಾಯಕ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವ್ಯವಸಾಯ ಸಹಕಾರಿ ಬ್ಯಾಂಕ್ ಪಡ್ನೂರ್ ಇದರ ಅದ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ, ವಿಟ್ಲ ಪಡ್ನೂರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಲತಾ, ಎಸ್.ಡಿ.ಎಂ.ಸಿ ಸದಸ್ಯೆ ಶ್ರೀಮತಿ ಪ್ರಮೀಳಾ, ಶಾಲಿನಿ ಹಾಗೂ ಅಶ್ರಫ್ ಉಪಸ್ಥಿತರಿದ್ದರು.

ಎನ್ .ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಅಬ್ದುಲ್ ರಶೀದ್ ಕೆ.ಎಂ ಸ್ವಾಗತಿಸಿದರು, ಸಹ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಕೋಲನ್ ಜನೆಟ್ ರವರು ಕಾರ್ಯಕ್ರಮ ಪ್ರಸ್ತಾಪಿಸಿದರು, ವಿದ್ಯಾರ್ಥಿ ಉಬೈಸ್ ಕಾರ್ಯಕ್ರಮ ನಿರೂಪಿಸಿದರು ಶಫಿಯಾ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!