December 16, 2025

ಗೋಮಾಂಸ ರಫ್ತು ಮಾಡುವ ವಿಶ್ವದ 2ನೇ ಅತೀ ದೊಡ್ಡ ರಾಷ್ಟ್ರ ಭಾರತ

0
image_editor_output_image447844055-1709716299139.jpg

ಹೊಸದಿಲ್ಲಿ: 2023ರಲ್ಲಿ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ವಿಶ್ವದ ಎರಡನೇ ಅತಿ ದೊಡ್ಡ ರಾಷ್ಟ್ರ ಭಾರತ ಎಂಬುದು ಪರಿಸರ ಮತ್ತು ಮಾನವ ಹಕ್ಕು ಗುಂಪಾದ ಗ್ಲೋಬಲ್ ವಿಟ್ನೆಸ್ ನಡೆಸಿರುವ ತನಿಖೆಯಲ್ಲಿ ತಿಳಿದುಬಂದಿದೆ. ಕಳೆದ 24 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರವಧಿಯಲ್ಲಿಯೇ ಅತೀ ಹೆಚ್ಚು ಬೀಫ್ ರಫ್ತು ಪ್ರಮಾಣ ಏರಿಕೆಯಾಗಿದೆ.

ಭಾರತದ ನಂತರದ ಸ್ಥಾನದಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಿವೆ. ಮೊದಲನೇ ಸ್ಥಾನವನ್ನು ಬ್ರೆಝಿಲ್ ಪಡೆದಿದೆ. 2023ರ ಎಪ್ರಿಲ್ ವರೆಗೆ ಭಾರತವು 14.75 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿದೆ.

ಇಷ್ಟು ಬೃಹತ್ ಪ್ರಮಾಣದಲ್ಲಿ ಬೀಫ್ ರಫ್ತು ಮಾಡಿ ಜಗತ್ತಲ್ಲೇ 2ನೇಕ್ಕೇರಿದೆ. ಜಗತ್ತಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೀಫ್ ರಫ್ತು ಮಾಡುವ ದೇಶ ಬ್ರೆಝಿಲ್ 2023ರ ಎಪ್ರಿಲ್ ವೇಳೆಗೆ 30 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು. 14 ಲಕ್ಷದ 22 ಸಾವಿರ ಟನ್ ಬೀಫ್ ರಫ್ತು ಮಾಡುವ ಮೂಲಕ ಅಮೆರಿಕ ಮೂರನೆ ಸ್ಥಾನದಲ್ಲಿದ್ದರೆ, 14 ಲಕ್ಷ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 4ನೆ ಸ್ಥಾನದಲ್ಲಿದೆ. ಭಾರತವು 2022ರಲ್ಲಿ 11 ಲಕ್ಷದ 75 ಸಾವಿರ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು ಎಂದು ಅಮೆರಿಕದ ಕೃಷಿ ಇಲಾಖೆ ನೀಡಿದ ವರದಿಯಲ್ಲಿರುವ ಅಂಕಿ ಅಂಶಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!