ಬಂಟ್ವಾಳ: ಸ್ಕೂಟರ್ ಗೆ ಕಾರು ಡಿಕ್ಕಿ: ಸ್ಕೂಟರ್ ಸವಾರ ಗಾಯ

ಬಂಟ್ವಾಳ: ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರನಿಗೆ ಗಾಯವಾಗಿದ್ದು, ಸವಾರ ಬಂಟ್ವಾಳ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಿ.ಸಿ ರೋಡಿನ ನಲ್ಕೆಮಾರ್ ಎಂಬಲ್ಲಿ ನಡೆದಿದೆ.
ಬೆಂಜನಪದವು ನಿವಾಸಿ ಪುರುಷೋತ್ತಮ ಆಚಾರ್ಯ ಎಂಬವರಿಗೆ ಕಾರು ಅಪಘಾತವಾಗಿ ಗಾಯವಾಗಿದ್ದು, ಅಮ್ಟಾಡಿ ಗ್ರಾಮದ ನಲ್ಕೆಮಾರ್ ದ್ವಾರದ ಬಳಿ ಅಪಘಾತ ಸಂಭವಿಸಿದೆ.
ಪುರುಷೋತ್ತಮ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಬೆಂಜನಪದವುವಿನಿಂದ ಬಿ.ಸಿ ರೋಡು ಕಡೆಗೆ ಬರುತ್ತಿರುವ ವೇಳೆ ಕೈಕಂಬ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ಗಾಯಗೊಂಡ ಪುರುಷೋತ್ತಮ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.