ಪುತ್ತೂರು: ಆಟೋ ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕ ರಫೀಕ್ ಮೃತ್ಯು

ಪುತ್ತೂರು: ಕೂರ್ನಡ್ಕ ಮರೀಲ್ ಐ.ಕೆ ಕಂಪೌಂಡು ನಿವಾಸಿ ದಿ.ಇಬ್ರಾಹಿಂ ರವರ ಮಗ ರಫೀಕ್ ರವರು ಮಾ. 2ರಂದು ನಿಧಾನರಾದರು.
KSRTC ಬಸ್ ನಿಲ್ದಾಣದ A M ಕಾಂಪ್ಲೆಕ್ಸ್ ನಲ್ಲಿ SKY ಮೊಬೈಲ್ ಅಂಗಡಿಯನ್ನು ಹೊಂದ್ದಿದ್ದ ನಂತರ ರಿಕ್ಷಾ ಚಾಲಕರಾಗಿ ದುಡಿಯುತಿದ್ದ ರವರು ಹಲವು ದಿನಗಳ ಹಿಂದೆ ಕೂರ್ನಡ್ಕ ಸಮೀಪ ಅಟೋರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಏ.ಜೆ.ಆಸ್ಪತ್ರೆಯಲ್ಲಿ ಐಸಿಯು ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಮೃತರು ಪತ್ನಿ, ಮೂವರು ಗಂಡು ಮಕ್ಕಳು ಮತ್ತು ಸಹೋದರರಾದ ಅಬ್ದುಲ್ ಅಝೀಝ್, ಅಬ್ದುಲ್ ರಝಾಕ್, ಆಕಾಶ್ ಪುಟ್ ವೇರ್ ಮಾಲಕ ಲತೀಫ್ ಮತ್ತು ಝಿಯಾದ್ ರವರನ್ನು ಅಗಲಿದ್ದಾರೆ.