March 21, 2026

ಮಂಗಳೂರು: ಮಸೀದಿಯೊಳಗೆ ಪ್ರವೇಶಿಸಿ ಅಸಭ್ಯವಾಗಿ ವರ್ತನೆ: ಆರೋಪಿ‌ ಹನುಮಂತ ಎಂಬಾತನ ಬಂಧನ

0
image_editor_output_image659781985-1706346536183.jpg

ಮಂಗಳೂರು: ಮಸೀದಿಯೊಳಗೆ ಪ್ರವೇಶಿಸಿದ ಅನ್ಯಕೋಮಿನ ವ್ಯಕ್ತಿಯೊಬ್ಬ ಅಸಭ್ಯವಾಗಿ ಮಾತನಾಡಿದ ಘಟನೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಬಾಗಲಕೋಟೆ ಮೂಲದ ಹನುಮಂತ ಎಂಬಾತ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮರಕ್ಕಡ ಗ್ರಾಮದ ಮಿಲ್ಲತ್ ನಗರ ಮಸೀದಿಗೆ ಪ್ರವೇಶಿಸಿದ್ದಾರೆ. ಆತ ಮಸೀದಿಯೊಳಗೆ ಇದ್ದಾಗ ಸಾರ್ವಜನಿಕರಿಂದ ವೀಡಿಯೊ ತೆಗೆದಿದ್ದು, ವ್ಯಕ್ತಿ ಮದ್ಯ ಸೇವಿಸಿದ ಸ್ಥಿತಿಯಲ್ಲಿ ಅಸಭ್ಯವಾಗಿ ಆಕ್ಷೇಪಾರ್ಹ ಪದಗಳನ್ನು ಮಾತನಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಆತನನ್ನು ಪತ್ತೆ ಹಚ್ಚಲಾಗಿದೆ. ಈತ ಮೂಲತಃ ಬಾಗಲಕೋಟೆಯವರಾಗಿದ್ದು, ಕೂಲಿ ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 19/2024 u/s 447, 295, 295(A) ರಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!