May 6, 2026

ಮುಸ್ಲಿಮರು ಜ್ಞಾನವಾಪಿ ಮಸೀದಿ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸದರೆ ಒಳ್ಳೆಯದು: ಬಿಜೆಪಿ‌ ಮುಖಂಡನ ಎಚ್ಚರಿಕೆ

0
image_editor_output_image-1394394518-1706349069735.jpg

ನವದೆಹಲಿ: ಮುಸ್ಲಿಮರು ಜ್ಞಾನವಾಪಿ ಮಸೀದಿ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸದರೆ ಒಳ್ಳೆಯದು ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

‘ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಇದನ್ನು ಸನಾತನಿಗಳು ಸ್ವಾಗತಿಸಿದ್ದಾರೆ. ಅಯೋಧ್ಯೆ, ಕಾಶಿ ಮತ್ತು ಮಥುರಾ ಯಾವಾಗಲೂ ನಮ್ಮ ಬೇಡಿಕೆಯಾಗಿವೆ’ಎಂದೂ ಸಚಿವರು ಹೇಳಿದ್ದಾರೆ.

ಕಾಶಿಯನ್ನು ಹಿಂದೂಗಳಿಗೆ ಹಸ್ತಾಂತರ ಮಾಡಿ ಎಂದು ಮುಸ್ಲಿಮರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇದು ಬದಲಾದ ಭಾರತ, ಸನಾತನ ಧರ್ಮದ ಯುವಕರು ಜಾಗೃತರಾಗಿದ್ದಾರೆ’ಎಂದು ಗಿರಿರಾಜ್ ಹೇಳಿದರು.

‘ಯಾರಾದರೂ ಬಾಬರ್ ಅಥವಾ ಔರಂಗಜೇಬ್ ಆಗಲು ಯತ್ನಿಸಿದರೆ, ನಮ್ಮ ಯುವಕರು ಮಹಾರಾಣಾ ಪ್ರತಾಪ್ ಆಗುತ್ತಾರೆ. ನೀವು ಶಾಂತಿ ಕಾಪಾಡಿಕೊಳ್ಳಬೇಕು’ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!