March 21, 2026

ಪ್ರೇಯಸಿಗೆ ಚೂರಿಯಿಂದ ಇರಿದ ಯುವಕ

0
image_editor_output_image-886575991-1706335541006.jpg

ಹಾವೇರಿ: ಯುವಕನೋರ್ವ ತಾನು ಪ್ರೀತಿಸಿದ ಹುಡುಗಿ ಬೇರೊಂದು ಯುವಕನ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂದು ಪ್ರೇಯಸಿಗೆ ಚೂರಿ ಇರಿದ ಘಟನೆ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ.

ಮಹೇಶ್ ಮೈಸೂರು ಎಂಬಾತ ಪ್ರೇಯಸಿ ಲಕ್ಷ್ಮಿ ಪವಾರ್ ಎಂಬಾಕೆಗೆ ಚಾರಿ ಇರಿದಿದ್ದಾನೆ. ಲಕ್ಷ್ಮಿ ಪವಾರ್ ಖಾಸಗಿ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

ಆಕೆಯನ್ನು ಮಹೇಶ್ 2 ವರ್ಷಗಳಿಂದ ಪ್ರೀತಿಸುತ್ತಿದ್ದನು. ಆದರೆ ಇತ್ತೀಚೆಗೆ ಆಕೆ ಬೇರೊಬ್ಬ ಹುಡುಗನೊಂದಿಗೆ ಸಲುಗೆಯಿಂದ ಇದ್ದಾಳೆ ಎಂಬ ವಿಚಾರ ತಿಳಿದು ಕೋಪಗೊಂಡ ಆರೋಪಿ ಮಹೇಶ್ ಲಕ್ಷ್ಮಿ ಪವಾರ್ ಗೆ ಚೂರಿ ಇರಿದಿದ್ದಾನೆ.

ಚಾಕು ಇರಿತದಿಂದ ಯುವತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನಾ ಸ್ಥಳಕ್ಕೆ ಬಂದ ಶಿಗ್ಗಾವಿ ಪೊಲೀಸರು ಪ್ರೇಮಿ ಮಹೇಶ್‌ನನ್ನ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!