March 21, 2026

ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ನಾಪತ್ತೆ

0
image_editor_output_image1956841743-1706335083943.jpg

ಕಾರ್ಕಳ : ಮಿಯಾರಿನ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ನಿಟ್ಟೆಯ ಶರ್ವನ್‌ ಕುಮಾರ್‌ ಎಂಬವರು ದೂರು ನೀಡಿದ್ದಾರೆ.

ಅರವಿಂದ್‌ ಚವ್ಹಾಣ್‌ (23) ನಾಪತ್ತೆಯಾಗಿರುವ ಯುವಕ. ಒಂದು ವರ್ಷದಿಂದ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ಅರವಿಂದ ಚವ್ಹಾಣ್‌ ಜ. 17ರಂದು ಸಹೋದರನಿಗೆ ಫೋನ್‌ ಮಾಡಿ ನಾನು ಕೆಲಸ ಬಿಟ್ಟಿದ್ದು, ಊರಿಗೆ ಬರುತ್ತೇನೆ ಎಂದು ಹೇಳಿದ್ದರು.

ಆದರೆ ಊರಿಗೆ ಹೋಗದೆ ನಾಪತ್ತೆಯಾಗಿದ್ದಾರೆ. ಇವರಿಗೆ ವಿಪರೀತ ಮದ್ಯಪಾನದ ಚಟ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!