October 3, 2026

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಭಾರತೀಯ ನರ್ಸ್ ಗಳು ಸೇರಿ ಐವರು ಮೃತ್ಯು

0
image_editor_output_image-1647009305-1791021168165

ರಿಯಾದ್/ಕೇರಳ: ಸೌದಿ ಅರೇಬಿಯಾದ ತೈಫ್-ರಾನಿಯಾ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಭಾರತೀಯ ನರ್ಸ್ ಗಳು ಸೇರಿದಂತೆ ಐವರು ಸಾವನಪ್ಪಿದ ಘಟನೆ ನಡೆದಿದೆ.

ಶುಕ್ರವಾರ ಇವರು ಪ್ರಯಾಣಿಸುತ್ತಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಾನಿಯಾದಿಂದ ಸುಮಾರು 40 ಕಿ.ಮೀ ದೂರದಲ್ಲಿ ಪಲ್ಟಿಯಾದ ಪರಿಣಾಮ ಈ ದುರಂತ ಸಂಭವಿಸಿದೆ. ಕಾರು ಚಾಲನೆ ಮಾಡುತ್ತಿದ್ದ ಸೌದಿ ಅರೇಬಿಯಾ ಪ್ರಜೆಯೂ ಕೂಡ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.ಮೃತಪಟ್ಟವರು ಕೇರಳ ಮತ್ತು ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದೆ.

 

ಮೃತಪಟ್ಟ ನಾಲ್ವರೂ ಭಾರತೀಯ ಮಹಿಳೆಯರು ನರ್ಸ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ವಿವರಗಳು ಹೀಗಿವೆ:

ಜೈಸಿಮೋಲ್ ಮ್ಯಾಥ್ಯೂ (46): ಕೇರಳದ ಕೊಟ್ಟಾಯಂ ಜಿಲ್ಲೆಯ ಆಯರ್ಕುನ್ನಂ ಮೂಲದವರು. ಜೋಬಿನಾ ಜೋನಿ: ಕೇರಳದ ಕೊಟ್ಟಾಯಂ ಜಿಲ್ಲೆಯ ಕುರುಮಲ್ಲೂರು ಮೂಲದವರು. ವಿಜಯಲಕ್ಷ್ಮಿ ಜಗದೀಶ್ (37): ತಮಿಳುನಾಡಿನ ಅಣ್ಣಾ ಸತ್ಯ ನಗರ ಮೂಲದವರು. ಹೆಪ್ಸಿಬಾ ದೇವಮಣಿ (33): ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈ ಮೂಲದವರು.

ಮೃತ ನಾಲ್ವರೂ ನರ್ಸ್‌ಗಳು ಸೌದಿ ಅರೇಬಿಯಾದ ತೈಫ್ ಗವರ್ನರೇಟ್ ವ್ಯಾಪ್ತಿಯಲ್ಲಿ ಬರುವ ‘ಅಲ್ ಘಾಫಾ’ ಹಾಗೂ ‘ಅಲ್ ಒವೈಲಾ’ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಅವರಿಗೆ ವಾರದ ರಜೆಯ ದಿನವಾಗಿದ್ದರಿಂದ, ಎಲ್ಲರೂ ಒಟ್ಟಾಗಿ ಶಾಪಿಂಗ್‌ಗಾಗಿ ಹತ್ತಿರದ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!