ಮಂಗಳೂರು: ಆಟೋ ಚಾಲಕರ ಸಮಸ್ಯೆ:
RTO ಬೇಟಿ ಮಾಡಿದ ಆಟೊ ರಾಜಕನ್ಮಾರ್ ಯೂನಿಯನ್(ರಿ) ದ.ಕ ಜೆಲ್ಲೆ ತಂಡ
ಮಂಗಳೂರು: ಆಟೊ ಚಾಲಕರ ಸಮಸ್ಯೆಗಳ ಬಗ್ಗೆ ದ.ಕ ಆಟೊ ರಾಜಕನ್ಮಾರ್ ಯೂನಿಯನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು RTO ಭೇಟಿ ಮಾಡಿ ಆಟೊ ಚಾಲಕರ ಸಮಸ್ಯೆಯನ್ನು ವಿವರಿಸಿದರು.
ಆಟೊ ರಾಜಕನ್ಮಾರ್ ಯೂನಿಯನ್ ಅಧ್ಯಕ್ಷರಾದ ಸಿದ್ದೀಕ್ ಮುಡಿಪು, ಗೌರವಧ್ಯಕ್ಷರಾದ ಉಸ್ಮಾನ್ ಮೊಂಟೆಪದವು, ಜೊತೆ ಕಾರ್ಯದರ್ಶಿ ಶಪೀಕ್ ಬೋಳಿಯರ್, ಅಡ್ಮಿನ್ ಶಾಕಿರ್ ಎಲ್ಯಾರ್ ಪದವು, ಮಂಗಳೂರು RTO ಕಛೇರಿಗೆ ಭೇಟಿ ನೀಡಿ ಆಟೊ ಚಾಲಕರ ದಿನ ನಿತ್ಯದ ನರಕಯಾತನೆ ಬಗ್ಗೆ RTO ಗಮನ ಸೆಳೆದಿದ್ದಾರೆ. ತಮ್ಮ ದುಡಿಮೆಯ ನಡುವೆ ತಮ್ಮಂತೆ ದುಡಿಯುವ ವರ್ಗದ ಸಮಸ್ಯೆ ಗಳಿಗೆ ಸ್ಪಂದಿಸುವ ಆಟೊ ರಾಜಕನ್ಮಾರ್ ನಡೆಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಗ್ರಾಮಾಂತರ ಆಟೊಗಳು ಮಂಗಳೂರು ನಗರ ಪ್ರವೇಶ ಮಾಡುತ್ತಿದ್ದಂತೆ, ನಗರ ಟ್ರಾಫಿಕ್ ಪೋಲಿಸ್, RTO ಆಟೊ ಚಾಲಕರ ಮೇಲೆ ಮುಗಿಬೀಳುವ ಘಟನೆ ದಿನ ನಿತ್ಯ ನಡೆಯುತ್ತಿದೆ. ಒಂದು ಆಟೊ ಗೆ 20,000 ದಂಡ ಹಾಕುವುದು ಈಗಾಗಲೇ ನಡೆದಿದೆ.
ಉಳ್ಳಾಲ ತಾಲೂಕಿನಲ್ಲಿ ದುಡಿಯುವ ಆಟೋ ಚಾಲಕರಿಗೆ ಪರ್ಮಿಟ್ ವಿಚಾರದಲ್ಲಿ ತುಂಬಾ ಕಷ್ಟಕರವಾಗಿದ್ದು, ಯಾವ ಪ್ರದೇಶಕ್ಕೆ ಹೋದರೂ ದಂಡ ನೀಡುವಂತಹ ಪರಿಸ್ಥಿತಿ ನಿರ್ಮಾನವಾಗಿತ್ತು ಮತ್ತು ಗ್ರಾಮಾಂತರ ಭಾಗದ ಬಾಡಿಗೆ ವಿಷಯದಲ್ಲಿ ತುಂಬಾ ಭಿನ್ನಾಭಿಪ್ರಾಯಗಳಿದ್ದು, ಇದೆಲ್ಲವನ್ನೂ ಅರಿತ ಆಟೋ ರಾಜಕನ್ಮಾರ್ ಯೂನಿಯನ್ (ರಿ) ದ.ಕ ಇವರು ಇಂದು ಸಾರಿಗೆ ಆಯುಕ್ತರನ್ನು ಭೇಟಿ ಮಾಡಿ ಈ ಮೇಲ್ಕಾಣಿಸಿದ ವಿಷಯದ ಬಗ್ಗೆ ಕೂಲಂಕುಷವಾಗಿ ಮಾತನಾಡಿದರು.
ಉಳ್ಳಾಲ ತಾಲೂಕಿನಲ್ಲಿ ದುಡಿಯುವ ಆಟೋ ರಿಕ್ಷಾಗಳಿಗೆ ಉಳ್ಳಾಲ ಪರ್ಮಿಟ್ ಮಾಡುವುದಾಗಿ ಮತ್ತು ಗ್ರಾಮಾಂತರ ಆಟೋ ರಿಕ್ಷಾ ಗಳಿಗೆ ಕಡ್ಡಾಯ ಮೀಟರ್ ಮಾಡುವುದಾಗಿ ಹಾಗೂ ಫೆಬ್ರವರಿ 10 2024 ಮೀಟರ್ ಅಳವಡಿಸಲು ಕೊನೆಯ ದಿನಾಂಕವಾಗಿರುತ್ತದೆ ಎಂದು ಆಟೋ ರಾಜಕನ್ಮಾರ್ ಯೂನಿಯನ್ ಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಆಟೊ ಚಾಲಕರಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಸ್ಪಂದಿಸುತ್ತೇವೆ ಮತ್ತು ಗ್ರಾಮಾಂತರ ಆಟೊ ಚಾಲಕರು ಮಂಗಳೂರು ನಗರಕ್ಕೆ ತುರ್ತು ಸಂದರ್ಭದಲ್ಲಿ ಅಥವಾ ರೈಲ್ವೇ, ಮೆಡಿಕಲ್, ಆಸ್ಪತ್ರೆ, ರೋಗಿ ಸರ್ಕಾರ ಕಛೇರಿ ಗಳಿಗೆ ನಗರಕ್ಕೆ ಬಂದು ಹೋಗಬಹುದು ಅಂಥ ಆಟೊ ರಾಜಕನ್ಮಾರ್ ಯೂನಿಯನ್ ತಂಡಕ್ಕೆ ಭರವಸೆ ನೀಡಿದ್ದಾರೆ.