ಉಡುಪಿ: ಗ್ರಾಮ ಪಂಚಾಯತ್ ಸದಸ್ಯನ ಮೇಲೆ ತಂಡದಿಂದ ಹಲ್ಲೆ
ಉಡುಪಿ: ಗ್ರಾಮ ಪಂಚಾಯತ್ ಸದಸ್ಯನೋರ್ವನ ಮೇಲೆ 35 ಜರ ತಂಡ ಗಂಭೀರ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಜಡ್ಕಲ್ ಎಂಬಲ್ಲಿ ನಡೆದಿದೆ.
ಉಡುಪಿಯ ಬೈಂದೂರು ತಾಲೂಕಿನ ಜಡ್ಕಲ್‌ನಲ್ಲಿ ಘಟನೆ ನಡೆದಿದ್ದು ಹಲ್ಲೆಗೊಳಗಾದ ವ್ಯಕ್ತಿ ಜಡ್ಕಲ್ ಗ್ರಾಮ ಪಂಚಾಯತ್ ಸದಸ್ಯ ಚಂದ್ರಮೋಹನ್ ನಾಯಕ್ ಎಂದು ಗುರುತಿಸಲಾಗಿದೆ.
ಚಂದ್ರಮೋಹನ್ ನಾಯಕ್ ಜಡ್ಕಲ್ ನ ಇಡೂರು ಕುಂಜ್ಞಾಡಿ ಪೆಟ್ರೋಲ್ ಬಂಕ್‌ನಲ್ಲಿ ತಮ್ಮ ಜೀಪ್‌ಗೆ ಡಿಸೆಲ್ ಹಾಕಿ ಮನಗೆ ವಾಪಸಾಗುತ್ತಿದ್ದರು. ಈ ವೇಳೆ ಚಂದ್ರಮೋಹನ್ ಚಲಾಯಿಸುತ್ತಿದ್ದ ಜೀಪ್ ಎದುರಲ್ಲಿ ಬರುತ್ತಿದ್ದ ಬೈಕ್ ಒಂದಕ್ಕೆ ತಾಗಿದೆ.
ಸಣ್ಣ ಪ್ರಮಾಣದ ಅಪಘಾತವಾಗಿರುವ ಕಾರಣ ಚಂದ್ರಮೋಹನ್ ಬೈಕ್ ಸವಾರನಲ್ಲಿ ಕ್ಷಮೆ ಯಾಚಿಸಿದ್ದಾಗಿ ಹೇಳಿದ್ದಾರೆ. ಆದ್ರೆ ಈ ವೇಳೆ ಬೈಕ್ ಸವಾರ ಅವ್ಯಾಚ ಪದದಿಂದ ನಿಂದಿಸಿರುವುದಾಗಿ ಚಂದ್ರಮೋಹನ್ ದೂರಿದ್ದಾರೆ.
ಬಳಿಕ ಬೀಸಿನ ಪಾರೆ ಎಂಬಲ್ಲಿರುವ ತಮ್ಮ ಮನೆಗೆ ಬರುವ ವೇಳೆಗೆ ಮನೆಯ ಸಮೀಪ ನೆರೆದಿದ್ದ ಸುಮಾರು 35 ಜನರ ತಂಡ ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಪೊಲೀಸರಲ್ಲಿ ದೂರಿದ್ದಾರೆ.
ಚಂದ್ರಮೋಹನ್ ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಜಾತಿ ನಿಂದನೆಯ ಕೇಸು ದಾಖಲಾಗಿದೆ.





