May 6, 2026

ಲಾರಿ ಢಿಕ್ಕಿ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

0
image_editor_output_image963767386-1705396877790.jpg

ಭರಮಸಾಗರ: ಚಿತ್ರದುರ್ಗಕ್ಕೆ ಬಸ್ಸಿಗಾಗಿ ಹೈವೇ ರಸ್ತೆಯಲ್ಲಿ ಕಾದು ನಿಂತ್ತಿದ್ದ ವಿದ್ಯಾರ್ಥಿನಿ ಮೇಲೆ ಲಾರಿಯೊಂದು ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಪಿಯುಸಿ ವಿದ್ಯಾರ್ಥಿನಿ ಸುಚಿತ್ರಾ(18) ಮೃತಳು. ಆದಿ ಎಂಬ ವಿದ್ಯಾರ್ಥಿ ಗಾಯಗೊಂಡಿದ್ದು, ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಚಿತ್ರಾ ಹಿರೇಕಂದವಾಡಿ ಗ್ರಾಮದ ಮೂಲದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 4 ರ ವಿಜಾಪುರ ಬಳಿ ಮಂಗಳವಾರ ಘಟನೆ ನಡೆದಿದೆ. ಈ ಘಟನೆಯಲ್ಲಿ ಮತ್ತೊರ್ವ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾನೆ.

ಇಲ್ಲಿನ‌ ಹೈವೇ ರಸ್ತೆ ಬಳಿಯ ಸರ್ವಿಸ್ ರಸ್ತೆಗೆ ಬಸ್ ಗಳು ಬಾರದೆ ಇರುವುದರಿಂದ ಚಿತ್ರದುರ್ಗಕ್ಕೆ ತೆರಳುವ ಎಲ್ಲಾ ವಿದ್ಯಾರ್ಥಿಗಳು ಸೇರಿದಂತೆ ಇತರ ಪ್ರಯಾಣಿಕರು ಹೈವೇ ರಸ್ತೆ ಮೇಲೆಯೇ ನಿಂತು ಬಸ್ ಗಳಿಗಾಗಿ ಕಾಯುವುದು ಕಳೆದ ಹಲವು ವರ್ಷಗಳಿಂದ ಇಲ್ಲಿ ಚಾಲ್ತಿಯಲ್ಲಿದೆ. ಮಂಗಳವಾರ ಏಕಾಏಕೀ ಲಾರಿಯೊಂದು ಹೈವೇ ರಸ್ತೆ ಬದಿ‌ನಿಂತಿದ್ದ ವಿದ್ಯಾರ್ಥಿನಿ ಮೇಲೆ ಹರಿದಿದೆ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶ ಗೊಂಡ ವಿಜಾಪುರ ಗ್ರಾಮಸ್ಥರು

Leave a Reply

Your email address will not be published. Required fields are marked *

error: Content is protected !!