ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕ ನಿಧನ
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕ ಅಬ್ದುಲ್ ರೆಹೆಮಾನ್ ಮಣಿಪಾಲ ಅವರು ಜ.15ರಂದು ನಿಧನರಾಗಿದ್ದಾರೆ.
ಅಬ್ದುಲ್ ರಹೆಮಾನ್ (77)ಅವರಿಗೆ ತೀವೃ ಹೃದಯಾಘಾತ ಸಂಭಸಿದ್ದು, ಮನೆಯಲ್ಲೇ ನಿಧನರಾಗಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಯಾಗಿ, ಮಹಾರಾಷ್ಟ್ರ ಅಪೆಕ್ಸ್ ಮೆನೇಜರ್ ಹಾಗೂ ಮಣಿಪಾಲ ಗ್ರೂಪ್‌ನಲ್ಲಿ ಡೆವಲಪ್‌ಮೆಂಟ್ ಮೆನೇಜರ್ ಆಗಿ ನಿವೃತ್ತಿ ಯಾಗಿದ್ದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರೋಟರಿ ಕ್ಲಬ್ ಉಡುಪಿ- ಮಣಿಪಾಲ ಅಧ್ಯಕ್ಷರಾಗಿ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಸ್ಥಾಪಕ ಸದಸ್ಯರಾಗಿ, ಲಯನ್ಸ್ ಕ್ಲಬ್ ಸದಸ್ಯರಾಗಿ, ಸಂತೋಷ್‌ನಗರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದ ಇವರು ಶಿವಮೊಗ್ಗದಲ್ಲಿ ಗಣಿತ ಶಿಕ್ಷಣರಾಗಿಯೂ ಕರ್ತವ್ಯ ನಿರ್ವಹಿಸುವ ಮೂಲಕ ಹಲವು ಕ್ಷೇತ್ರಗಳಿಗೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.
ಇವರು ಪತ್ನಿ, ಅಮೆರಿಕಾದಲ್ಲಿರುವ ಸಾಪ್ಟ್‌ವೇರ್ ಇಂಜಿನಿಯರ್ ಆಸೀಫ್ ಹುಸೇನ್, ಸೌದಿ ಅರೇಬಿಯಾದ ಸಾಫ್ಟ್‌ವೇರ್ ಇಂಜಿನಿಯರ್ ಮನ್ಸೂರು ಹಾಗೂ ಉದ್ಯಮಿ ಆರೀಫ್ ರೆಹಮಾನ್ ಸೇರಿದಂತೆ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯರನ್ನು ಅಗಲಿದ್ದಾರೆ.





