ಭೀಕರ ರಸ್ತೆ ಅಪಘಾತ: ಬಂಡೀಪುರದ ಸಫಾರಿಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಸಾವು
ಚಾಮರಾಜನಗರ: ಸಂಕ್ರಾಂತಿ ಹಬ್ಬದ ರಜೆಯ ಗುಂಗಿನಲ್ಲಿ ಕುಟುಂಬದ ಜೊತೆ ಬಂಡೀಪುರದ ಸಫಾರಿಗೆ ತೆರಳಲು ಹೋಗುತ್ತಿದ್ದ ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಘಟನೆ ಕೊಳ್ಳೆಗಾಲದ ಸಮೀಪದ ಪಾಳ್ಯ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಸಂತೋಷ್, ಸೌಮ್ಯ ಹಾಗೂ ದಂಪತಿಯ ಮಕ್ಕಳಾದ ನಿತ್ಯ ಸಾಕ್ಷಿ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ.
ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.





