ಮೈಸೂರು ಸ್ಯಾಂಡಲ್ ಸೋಪ್ ನಕಲಿ ಘಟಕದ ಮೇಲೆ ದಾಳಿ: 2 ಕೋಟಿ ರೂ. ಮೌಲ್ಯದ ಸಾಮಗ್ರಿ ವಶಕ್ಕೆ
ಹೈದರಾಬಾದ್: ಇಲ್ಲಿನ ಮೈಸೂರು ಸ್ಯಾಂಡಲ್ ಸೋಪ್ ನಕಲಿ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ 2 ಕೋಟಿ ರೂ. ಮೌಲ್ಯದ ನಕಲಿ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಚಿವ ಎಂ.ಬಿ.ಪಾಟೀಲ್, ಹೈದರಾಬಾದ್ ಮಾರುಕಟ್ಟೆಗೆ ನಕಲಿ ಮೈಸೂರು ಸ್ಯಾಂಡಲ್ ಸೋಪ್ ಪೂರೈಕೆಯಾಗುತ್ತಿರುವ ಬಗೆಗೆ ಅನಾಮಧೇಯ ಕರೆ ಬಂತು. ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಸ್ಥೆಯ MDಯವರಿಗೆ ನಿರ್ದೇಶನ ನೀಡಿದ್ದೆ. ಅದರಂತೆ ಸಿಕಂದರಾಬಾದಿನಲ್ಲಿರುವ ನಮ್ಮ ಸಂಸ್ಥೆಯ ಅಧಿಕೃತ ಮಾರಾಟದ ಸಿಬ್ಬಂದಿ, ನಕಲಿಗಳ ಜಾಲವನ್ನು ಬೇಧಿಸಲು ತಂತ್ರ ರೂಪಿಸಿದರು ಎಂದು ತಿಳಿಸಿದ್ದಾರೆ.





