ಮನೆಯ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತ್ಯು
ಹೈದರಾಬಾದ್: ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ತನಿಷ್ಕ್ (11) ಮೃತಪಟ್ಟಿರುವ ಘಟನೆ ಅತ್ತಾಪುರ ಪ್ರದೇಶದಲ್ಲಿ ನಡೆದಿದೆ.
ಮನೆಗೆ ತಂದಿದ್ದ ಗಾಳಿಪಟ ಹಾರಿಸುವ ಖಷಿಯಲ್ಲಿ ಪುಟ್ಟ ಬಾಲಕ ಮನೆಯ ಟೆರೇಸ್ ಮೇಲೆ ಹೋಗಿದ್ದಾನೆ.
ಆದರೆ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತಪಟ್ಟಿರುವುದು ಹಬ್ಬದ ಮನೆಯಲ್ಲಿ ಸೂತಕದ ವಾತಾವಾರಣಕ್ಕೆ ಕಾರಣವಾಗಿದೆ.





