ವಿಟ್ಲ: ಪೂರ್ಲಪ್ಪಾಡಿ ಯುವಕ ಮಂಡಲ,ಕಬಡ್ಡಿ ಪಂದ್ಯಾಟ
ವಿಟ್ಲ: ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ, ವಿಟ್ಲ ಪಡ್ನೂರು, ಯುವಕ ಮಂಡಲದ ಆಶ್ರಯದಲ್ಲಿ ಹಾಗೂ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ನ ಸಹಭಾಗಿತ್ವದಲ್ಲಿ 2 ನೇ ವರ್ಷದ ಹೊನಲು ಬೆಳಕಿನ ಪುರುಷರ 62 ಕೆ.ಜಿ. ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಪೂರ್ಲಪ್ಪಾಡಿ ಶ್ರೀವರ ವೇದಿಕೆ ಮುಂಭಾಗದಲ್ಲಿ ಜರುಗಿತು. ಕಬಡ್ಡಿ ಪಂದ್ಯಾಟಕ್ಕೆ ರಾತ್ರಿ ದೀಪ ಬೆಳಗಿಸಿ ಉದ್ಘಾಟನೆಗೊಳ್ಳುವುದರ ಮುಖಾಂತರ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿಟ್ಲಪಡ್ನೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಜಯಂತ್ ಪೂರ್ಲಪ್ಪಾಡಿ ವಹಿಸಿದ್ದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಪ್ರೇಮಲತಾ, ನವೀನ್ ತಂತ್ರಿ ಕುಂಟುಕುಡೇಲು, ರೋಹಿತ್ ತಂತ್ರಿ ಕುಂಟುಕುಡೇಲು, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅದ್ಯಕ್ಷ ಮಾಧವ ಮಾವೆ, ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ನಾಗೇಶ್ ಶೆಟ್ಟಿ ಕೊಡಂಗಾಯಿ, ರಾಮಣ್ಣ ಗೌಡ ದೇವರಮನೆ, ವಕೀಲರು (ನೋಟರಿ), ಧರ್ಮಾವತಿ ಪಿ. ಬಿ, ಗಂಗಾಧರ ಗೌಡ ಕಾಣಿಚ್ಚಾರು, ಸತೀಶ್ ಭಟ್ ಪಂಜಿಗದ್ದೆ, ಸುಜಾತ ಮಹೇಶ್ ದೇವರಮನೆ, ಅರವಿಂದ ರೈ ಮೂರ್ಜೆಬೆಟ್ಟು, ಚರಣ್ ಕಾಪುಮಜಲು, ಅಬೂಬಕ್ಕರ್ ಅನಿಲಕಟ್ಟೆ, ಮಂಡಲದ ಗೌರವಾಧ್ಯಕ್ಷ ಈಶ್ವರ ಭಟ್ ಪಿ, ಕಲಂದರ್ ಪರ್ತಿಪ್ಪಾಡಿ, ಹರ್ಷದ್ ಕುಕ್ಕಿಲ, ಮಹಾಬಲ ಆಳ್ವ ಎರ್ಮೆನಿಲೆ, ಜಯಲಕ್ಷ್ಮಿ ಕೆ, ರೋಹಿತ್ ರೈ ಚೆಂಬರಡ್ಕ, ವಿನಯ ಜೋಗಿ ಕಾಪುಮಜಲು, ಶಿವಪ್ಪ ಗೌಡ ಖಂಡಿಗ, ಸುದೇಶ್ ಭಂಡಾರಿ ಎರ್ಮೆನಿಲೆ, ವಸಂತ ಗೌಡ ನಡುಮನೆ ಹಾಗೂ ಯುವಕ ಮಂಡಲದ ಅಧ್ಯಕ್ಷ ಸೋಮನಾಥ ಗೌಡ ಕೆ, ಉಪಸ್ಥಿತರಿದ್ದು, ಶುಭ ಹಾರೈಸಿದರು. ಸುಮಾರು 20 ತಂಡಗಳು ಭಾಗವಹಿಸುವುದರೊಂದಿಗೆ ಬಿ.ಕೆ. ಬಾಯ್ಸ್ ಬಂಗೇರಕೋಡಿ ಪ್ರಥಮ ಸ್ಥಾನ ಪಡೆಯಿತು. ಹಾಗೆಯೇ ದ್ವಿತೀಯ ಸ್ಥಾನ 7 ಸ್ಟಾರ್ ಕಲ್ಪನೆ ತಂಡ ಪಡೆಯಿತು. ತೃತೀಯ ಸ್ಥಾನವನ್ನು ಟಾಸ್ಕ್ ಬಸವನಗುಡಿ ಹಾಗೂ ಚತುರ್ಥ ಸ್ಥಾನವನ್ನು ಅಶ್ವಮೇಧ ಬಜ್ಪೆ ತಂಡ ಪಡೆಯಿತು.






