March 18, 2026

TPL – 6 ಕ್ರಿಕೆಟ್ ಪಂದ್ಯಾಟ:  GLADIATORS TAIF  ಚಾಂಪಿಯನ್

0
image_editor_output_image-61892937-1704474768795

ತಾಯಿಫ್ : _ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್_ (ತಾಯಿಫ್ ಸೌದಿ ಅರೇಬಿಯಾ)
_ಇದರ ಆಶ್ರಯದಲ್ಲಿ ನಡೆದ ಅಂಡರ್ ಆರ್ಮ್ ಮಾದರಿಯ TAIF PREMIER LEAGUE
TPL-6 ಕ್ರಿಕೆಟ್ ಪಂದ್ಯಾಕೂಟವು ತಾಯಿಫ್ ‘ನ ಫೈಸಲಿಯಾದಲ್ಲಿ ನಡೆಯಿತು.

ಸತತ ಮೂರು ಶುಕ್ರವಾರದಂದು ನಡೆದ ಲೀಗ್ ಹಂತವು, 29/12/2023ರ ಶುಕ್ರವಾರದಂದು ಸಮಾಪ್ತಿಗೊಂಡಿದೆ_

ಬಹಳ ರೋಚಕ, ರೋಮಾಂಚಕಾರಿಯಾಗಿ ಸಾಗಿದ ಪಂದ್ಯಾಕೂಟದಲ್ಲಿ ಸಲೀಂ ಸೂರಿಂಜೆ ನಾಯಕತ್ವದ ಗ್ಲಾಡಿಯೇಟರ್ಸ್ ತಾಯಿಫ್,  ನೌಫಲ್ ಬೆಂಗ್ರೆ ‌ನಾಯಕತ್ವದ ಯಂಗ್ ಫೈಟರ್ಸ್ ತಾಯಿಫ್, ಹಫೀಝ್ ಅಡ್ಡೂರು ನೇತೃತ್ವದ ರೋಯಲ್ ಸ್ಟೈಕರ್ಸ್ ತಾಯಿಫ್  ಮತ್ತು ಅವಿನಾಶ್ ಕೊಣಾಜೆ ನಾಯಕತ್ವದ ಗೇಮ್ ಸ್ವಿಂಗರ್ಸ್ ತಾಯಿಫ್  ತಂಡಗಳು ಭಾಗವಹಿಸಿದವು.

ಉತ್ತಮ ಪ್ರದರ್ಶನದೊಂದಿಗೆ ಆಡಿದ  ಗೇಮ್ ಸ್ವಿಂಗರ್ಸ್ ತಾಯಿಫ್ ಲೀಗ್ ಹಂತದಲ್ಲೇ ಹೊರನಡೆದರೆ, ಯಂಗ್ ಫೈಟರ್ಸ್ ತಾಯಿಫ್ ತಂಡವು ಎರಡೂ ಸೆಮಿ ಫೈನಲ್ ‘ನಲ್ಲಿ ಸೋಲುದರೊಂದಿಗೆ ಕೂಟದಿಂದ ಹೊರನಡೆಯಿತು.
ಮುಂದೆ ಗ್ಲಾಡಿಯೇಟರ್ಸ್ ತಾಯಿಫ್   ಮತ್ತು ರೋಯಲ್ ಸ್ಟೈಕರ್ಸ್ ತಾಯಿಫ್ ಫೈನಲ್ ಪ್ರವೇಶಿಸಿ ಜಿದ್ದಾ-ಜಿದ್ದಿನ ಆಟಕ್ಕೆ ಫೈಸಲಿಯಾದ ಕ್ರೀಡಾಂಗಣ ಸಾಕ್ಷಿಯಾಯಿತು.

ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ‘ರೋಯಲ್ ಸ್ಟೈಕರ್ಸ್ ತಾಯಿಫ್’ ತಂಡವು ನಾಯಕ ಹಫೀಝ್ ಅಡ್ಡೂರು ರವರ ಭರ್ಜರಿ ಆರಂಭಿಕ ಆಟದೊಂದಿಗೆ ಬೃಹತ್ ಮೊತ್ತ 47 ಕಲೆ ಹಾಕಿತು.
ಗುರಿ ಬೆನ್ನಟ್ಟಿ ಇನ್ನಿಂಗ್ಸ್ ಆರಂಭಿಸಿದ ‘ಗ್ಲಾಡಿಯೇಟರ್ ತಾಯಿಫ್” ತಂಡವು 4 ಉದ್ದರಿ ಕಳೆದು ವಿಜಯದ ಪತಾಕೆ ಹಾರಿಸಿ 2023,ರ ಸೀಸನ್ -6 ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿದರು.

ಆಲ್’ರೌಂಡರ್ ಪ್ರದರ್ಶನ ನೀಡಿದ ದೈತ್ಯ ಆಟಗಾರ ಇರ್ಶಾದ್ ಸುಳ್ಯ 16 ವಿಕೆಟ್ ಮತ್ತು 101 ರನ್ ಬಾರಿಸಿದ ಅವರು ‘ಸರಣಿ ಶ್ರೇಷ್ಠ’ ಪ್ರಶಸ್ತಿ ತನ್ನಗಾಗಿಸಿದಲ್ಲದೆ, ಸ್ಫೋಟಕ ದಂಡನೆಯ ಮೂಲಕ 101 ರನ್ ಸಿಡಿಸಿದಕ್ಕೆ ಅನುಗುಣವಾಗಿ ‘ಉತ್ತಮ ದಾಂಡಿಗ’ ಪ್ರಶಸ್ತಿಯು ಕೂಡ ತನ್ನವಶವಾಗಿಸಿದರು_

16 ಉದ್ದರಿ ಉರುಳಿಸಿ ಉತ್ತಮ ದಾಳಿ ಸಂಘಟಿಸಿ ‘ಉತ್ತಮ ಎಸೆತಗಾರ’ ಪ್ರಶಸ್ತಿಯೂ ಇರ್ಶಾದ್ ಸುಳ್ಯ  ಪಾಲಾಯಿತು_

ಮಿಂಚಿನ ಗೂಟರಕ್ಷಕ  ‘ಉತ್ತಮ ಗೂಟ ರಕ್ಷಕ’ ಪ್ರಶಸ್ತಿ ಸಾಬಿತ್ ಮನಾಲ್ ಸ್ವೀಕರಿಸಿದರು.

ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿ ಫೈಝಲ್ ಗುರುಪುರ ಪಾಲಾಯಿತು.

ಫೈನಲ್ ಹೀರೋ ಭರವಸೆಯ  ಶಫೀಕ್ ಮಂಜೇಶ್ವರ ಆದರೆ, ಇರ್ಶಾದ್ ಸುಳ್ಯ ‘ಗೇಮ್ ಚೇಂಜರ್’ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *

You may have missed

error: Content is protected !!