April 15, 2025

ಕಾಸರಗೋಡು: ಕೊಲೆ ಯತ್ನ ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿಯ ಬಂಧನ

0

ಕಾಸರಗೋಡು ಕೊಲೆ ಯತ್ನ, ಮಾದಕ ವಸ್ತು ಸಾಗಾಟ ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವರ್ಕಾಡಿ ಮೊರತ್ತನೆಯ ಅಸ್ಗರ್ ( 30) ಬಂಧಿತ ಆರೋಪಿ.

ಈತನ ಬಳಿಯಿಂದ ಮೂರು ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಮೊರತ್ತನೆ ಬಳಿಯಿಂದ ಈತನನ್ನು ಬಂಧಿಸಲಾಗಿದೆ.

 

 

ಮಾದಕ ವಸ್ತು ಸಾಗಾಟ, ಕೊಲೆ ಯತ್ನ, ಅನುಮತಿ ಹೀಗೆ ಹಲವಾರು ಮೊಕದ್ದಮೆಗಳು ಈತನ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಈ ಹಿಂದೆಯೂ ಹಲವು ಬಾರಿ ಮಾದಕ ವಸ್ತು ಸಾಗಾಟ ಮಾಡಿದ್ದಾನೆಂದು ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!