ಕಾಡಾನೆ ದಾಳಿಗೆ ಮಹಿಳೆ ಸಾವು

ಕನಕಪುರ ತಾಲೂಕಿನ ಕಸಬಾ ಹೋಬಳಿ ಬರಡನಹಳ್ಳಿ ಗ್ರಾಮದಲ್ಲಿ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಜ.1ರ ಸೋಮವಾರ ಬೆಳಗ್ಗೆ ನಡೆದಿದೆ.
ಆನೆ ದಾಳಿಯಿಂದ ತೀವ್ರ ಅಸ್ವಸ್ಥಗೊಂಡಿರುವ ಮಹಿಳೆಯನ್ನು ಬರಡನಹಳ್ಳಿ ಉಪ್ಪಾಕೆರೆದೊಡ್ಡಿ ಗ್ರಾಮದ 30 ವರ್ಷದ ದುಂಡಮ್ಮ ಎಂದು ಗುರುತಿಸಲಾಗಿದೆ.
ಇವರು ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕಲು ಹೋಗುತ್ತಿದ್ದಾಗ ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಆನೆಯ ದಾಳಿ ನಡೆಸಿ, ಮಹಿಳೆ ಸತ್ತಿರಬಹುದು ಎಂದು ಬಿಟ್ಟು ಹೋಗಿದೆ.
ಆನೆ ದಾಳಿಯಿಂದ ಮಹಿಳೆಯ ಎಡ ತೋಳು ಸಂಪೂರ್ಣ ಜಜ್ಜಿ ಹೋಗಿದೆ. ಜಮೀನಿನ ಕಡೆ ಹೋದವರು ನೋಡಿಕೊಂಡು ಗ್ರಾಮಸ್ಥರಿಗೆ ಮತ್ತು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.