ಎರಡು ಕಾರುಗಳ ಅಪಘಾತ: ಇಬ್ಬರು ಸಾವು, ನಾಲ್ವರು ಗಂಭೀರ
ಬೆಳಗಾವಿ: ಎರಡು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗೊಂಡ ಘಟನೆ ಬೈಲಹೊಂಗಲದ ಇಂಚಲ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಬೈಲಹೊಂಗಲ ನಗರದ ನಿವಾಸಿ ಮಂಗಲ ಭರಮನಾಯ್ಕರ್ (50), ಚಾಲಕ ಶ್ರೀಶೈಲ ನಾಗನಗೌಡರ್ ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ರಾಯನಾಯ್ಕ ಭರಮನಾಯ್ಕರ್ (87), ಗಂಗವ್ವ ಭರಮನಾಯ್ಕರ್ (80), ಮಂಜುಳ ನಾಗನಗೌಡರ್ (30), ಮತ್ತೊಂದು ಕಾರಿನ ಇಂಚಲ ಗ್ರಾಮದ ಚಾಲಕ ಸುಬಾನಿ ವಕ್ಕುಂದ (28) ಎಂದು ಗುರುತಿಸಲಾಗಿದೆ.





