ಬಂಟ್ವಾಳ: ಮುಸ್ಲಿಂ ಮಹಿಳೆಯರ ವಿರುದ್ಧ ನಿಂದನೆ: ವಿಮೆನ್ ಇಂಡಿಯಾ ಪ್ರತಿಭಟನೆ: ಬಂಧಿಸಿರಿ ಬಂಧಿಸಿರಿ ಪ್ರಭಾಕರ ಭಟ್ ನ ಬಂಧಿಸಿರಿ ಎಂದು ಘೋಷಣೆ ಕೂಗಿದ ಮಹಿಳೆಯರು
ಬಂಟ್ವಾಳ: ಬಂಧಿಸಿರಿ, ಬಂಧಿಸಿರಿ ಪ್ರಭಾಕರ ಭಟ್ಟನ ಬಂಧಿಸಿರಿ ಎಂಬ ಘೋಷಣೆ ಇಂದು ಬಿಸಿರೋಡಿನ ತಾಲೂಕು ಆಡಳಿತ ಸೌಧದ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕೇಳಿ ಬಂತು.
ವಿಮೆನ್ ಇಂಡಿಯಾ ಮೂವ್ ಮೆಂಟ್ ವತಿಯಿಂದ ಮುಸ್ಲಿಂ ಮಹಿಳೆಯರ ವಿರುದ್ಧ ಮಂಡ್ಯದಲ್ಲಿ ಅವಾಚ್ಚವಾಗಿ ನಿಂಧಿಸಿದ ಕಲ್ಲಡ್ಕ ಡಾ| ಪ್ರಭಾಕರ ಭಟ್ ವಿರುದ್ದ ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಕಲ್ಲಡ್ಕ ಡಾ| ಭಟ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಹಲವು ಘೋಷಣೆ ಕೂಗಿದರು.
ಗ್ಯಾರಂಟಿ ಬದಲು ಮಹಿಳೆಯರ ವಿರುದ್ದ ಅವ್ಯಾಚ್ಚವಾಗಿ ನಿಂಧಿಸಿದ ಭಟ್ ಮೇಲೆ ಬುಲ್ಡೋಜರ್ ಹರಿಸಿ ನ್ಯಾಯ ಕೊಡಿ,ಅದರ ಬದಲು ನಿಮ್ಮ ಗ್ಯಾರಂಟಿಗಳು ಯಾರಿಗೆ ಬೇಕು ಎಂದು ಮುಖ್ಯಮಂತ್ರಿ ವಿರುದ್ದ ಪ್ರತಿಭಟನಾಕಾರರು ಹರಿಹಾಯ್ದರು.
ಮುಂದಿನ ಲೋಕಸಭೆಗೆ ತೊಂದರೆಯಾಗುತ್ತದೆ ಎಂದು ಹೆದರಿ ಭಟ್ ಅವರನ್ನು ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿಯನ್ನು ವಿಮೆನ್ ಇಂಡಿಯಾ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿಮ್ಮ ಮೌನ ಗುಲಾಮತನವಾದರೆ ನಾವು ಸುಮ್ಮನಿರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಸಂದರ್ಭದಲ್ಲಿ ಮಾತುಕೊಟ್ಟುದ್ದು ನೆನಪಿಲ್ವೆ, ಅಧಿಕಾರಕ್ಕೆ ಬಂದರೆ ಭಟ್ ನ ಬಂಧನ ಮಾಡುತ್ತೇವೆ ಎಂದು ಹೇಳಿದ್ದು ನಮಗೆ ನೆನಪಿದೆ, ದ್ವೇಷ ಬಿಟ್ಟು ದೇಶ ಕಟ್ಟಲು ದಿಟ್ಟತನದಿಂದ ಮುನ್ನುಗ್ಗಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿಮೆನ್ ಇಂಡಿಯಾ ಮೂವ್ ಮೆಂಟ್ ಇದರ ಜಿಲ್ಲಾಧ್ಯಕ್ಷೆ ನೌರಿನ್ ಆಲಂಪಾಡಿ, ಪ್ರಧಾನ ಕಾರ್ಯದರ್ಶಿ ನಿಶಾ, ರಾಜ್ಯ ನಾಯಕಿ ನಸೀಭಾ, ಪ್ರಮುಖರಾದ ನಸ್ರಿಯಾ ಬೆಳ್ಳಾರೆ, ನುಸ್ರಿಯಾ ಕಡೂರು, ತಾಹೀದಿ ಮುಕ್ರಿಯಾ ಮತ್ತಿತರ ಹಾಜರಿದ್ದರು.