ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ INDIA SABAKI CHALLENGE ಕರಾಟೆ ಟೂರ್ನಮೆಂಟ್ ನಲ್ಲಿ ವಿದ್ಯಾರ್ಥಿಗಳ ಸಾಧನೆ
ಪುತ್ತೂರು: India Development Foundation (IDF) for Overseas Indias ಇವರ ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ INDIA SABAKI CHALLENGE ಕರಾಟೆ ಟೂರ್ನಮೆಂಟ್ ನಲ್ಲಿ ಕರಾಟೆ ಶಿಕ್ಷಕ ಸೆನ್ಸಾಯಿ ಮಾಧವ ವಿಟ್ಲ ಇವರ ವಿಧ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ. ವಿಧ್ಯಾರ್ಥಿಗಳ ಹೆಸರು ಈ ಕೆಳಗಿನಂತಿವೆ ಕುಮಿಟೆ ವಿಭಾಗದಲ್ಲಿ ವಿಟ್ಲ ಸಂತ ರೀಟಾ ಶಾಲೆಯ ಮೋಹಕ್ ಡಿ ಆರ್-ಪ್ರಥಮ, * ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲದ ಸಾನ್ವಿ – ಪ್ರಥಮ, * ಧ್ರುವ – ದ್ವಿತೀಯ * ಪ್ರನ್ವಿ ಕಾಮತ್ – ತೃತೀಯ * ಸಿರಿ ವಿದ್ಯಾಲಯ ಸಾಲೆತ್ತೂರಿನ ಪ್ರಣವ್ – ದ್ವಿತೀಯ * ವಿಠಲ ಪದವಿ ಪೂರ್ವ ಕಾಲೇಜಿನ ಭವಿಶ್ – ದ್ವಿತೀಯ * ಮೌಂಟ್ ಕಾರ್ಮೆಲ್ ಶಾಲೆಯ ಆರೋನ್ ಕೆಲ್ವಿನ್ ಡಿಸೋಜ – ತೃತೀಯ ಮತ್ತು ಕರಾಟೆ ತರಬೇತುದಾರ ರೋಹಿತ್ S N-ದ್ವಿತೀಯ
ಗ್ರೂಪ್ ಕುಮಿಟೆ ವಿಭಾಗದಲ್ಲಿ Under-12ನಲ್ಲಿ ಧ್ರುವ(ಜೆಸೀಸ್ ವಿಟ್ಲ) , ರಿಯೋನ್ ಲಸ್ರಾದೊ(ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು) ಮತ್ತು ಸಂಕೇತ್ ಶೆಟ್ಟಿ(ಸಂತ ರೀಟಾ ವಿಟ್ಲ) ದ್ವಿತೀಯ ಸ್ಥಾನವನ್ನು ಪಡೆದರೆ,
Under-14ನಲ್ಲಿ ರಿಶೋನ್ ಲಸ್ರಾದೊ(ಬೆಥನಿ ಆಂಗ್ಲ ಮಾಧ್ಯಮ ಶಾಲೆ), ಪ್ರಥಮ್ ಕಾಮತ್(ಜೇಸಿಸ್ ವಿಟ್ಲ) ಮತ್ತು ಪ್ರಣವ್(ಸಿರಿ ವಿದ್ಯಾಲಯ)-ಪ್ರಥಮ ಸ್ಥಾನ ಪಡೆದಿರುತ್ತಾರೆ.
Under-18ನಲ್ಲಿ ರೋಶಿನಿ(ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು), ಪಾವನ M(ವಿವೇಕಾನಂದ ಪದವಿ ಪೂರ್ವ ಕಾಲೇಜು) ಮತ್ತು ಮೇಘನ(ವಿಠಲ ಪ್ರೌಢಶಾಲೆ) ದ್ವಿತೀಯ ಸ್ಥಾನ ಪಡೆದಿರುತ್ತಾರೆ






