June 30, 2026

15 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸರ್ವೇಯರ್

0
image_editor_output_image-383802409-1702966951787.jpg

ಬಾಗಲಕೋಟೆ: ಕಚೇರಿಯಲ್ಲಿ 15 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಬೀಳಗಿಯ ಸರ್ವೇಯರ್ ರೆಡ್‍ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸರ್ವೇಯರ್ ಮಹಾಂತೇಶ್ ಕವಳಿಕಟ್ಟಿ, ಅಣ್ಣೇಶಿ ಲಮಾಣಿ ಎಂಬವರಿಂದ 15 ಸಾವಿರ ರೂ. ಹಣ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸುನಗ ಗ್ರಾಮದಲ್ಲಿದ್ದ 8 ಎಕರೆ ಜಮೀನಿನ ಪಿಟಿ ಶೀಟ್ ಮಾಡಿ ಕೊಡಲು ಆತ ಲಂಚ ಕೇಳಿದ್ದ. ಈ ಹಿಂದೆ 28 ಸಾವಿರ ರೂ. ಪಡೆದು ಕೆಲಸ ಮಾಡಿಕೊಟ್ಟಿರಲಿಲ್ಲ. ಅಲ್ಲದೇ 38 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!