ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಮಗು ಸಾವು
ಬೆಂಗಳೂರು: ನಗರದ ಕೆಸಿ ಜನರಲ್ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಜಗತ್ತಿಗೆ ಬರುವ ಮುಂಚೆಯೇ ಕಂದಮ್ಮ ಕಣ್ಣು ಮುಚ್ಚಿದ ಘಟನೆಯೊಂದು ನಡೆದಿದೆ.
ಚೊಕ್ಕಸಂದ್ರದ ದೇವಿಕಾ ಎಂಬವರಿಗೆ 9 ತಿಂಗಳು ಭರ್ತಿಯಾಗಿ 12 ದಿನದ ಬಳಿಕ ಆಸ್ಪತ್ರೆ ವೈದ್ಯರು ಡೆಲಿವರಿಗೆ ಡೇಟ್ ಕೊಟ್ಟರು.
ಆದರೆ ಡೇಟ್ ಮೀರಿದೆ ಸಿಜೇರಿಯನ್ ಮಾಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದರೂ ವೈದ್ಯರು ಒಪ್ಪದೇ ನಾರ್ಮಲ್ ಗೆ ರೆಡಿ ಮಾಡಿದ್ದಾರೆ.
ಬಳಿಕ ನಾರ್ಮಲ್ ಆಗಲ್ಲ ಸಿಜೇರಿಯನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಕೊನೆಗೆ ಮಗು ಗಲೀಜು ನೀರು ಕುಡಿದಾಗಿದ್ದು, ಮಗು ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ.




