ಉಳ್ಳಾಲ ಪಾವೂರಿನಲ್ಲಿ ಅಕ್ರಮ ಮರಳು ಮಾಫೀಯಾ, 4 ದೋಣಿಗಳು ಪೊಲೀಸ್ ವಶಕ್ಕೆ..!
ಉಳ್ಳಾಲ: ಉಳ್ಳಾಲ ಹರೇಕಳ ಪಾವೂರು ಬಳಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ.
ಹರೇಕಳ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿ ಆಧರಿಸಿ ಉಳ್ಳಾಲ ಠಾಣಾಧಿಕಾರಿ ಬಾಲಕೃಷ್ಣ ನೇತೃತ್ವದ ತಂಡ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ದಾಳಿ ನಡೆಸಿದ್ದಾರೆ. ನೇತ್ರಾವತಿ ನದಿಯಿಂದ ದೋಣಿಗಳ ಮೂಲಕ ಮರಳು ತೆಗೆದು ಅದನ್ನು ಸಂಗ್ರಹಿಸಿ ಹತ್ತಿರದ ಮನೆಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಮರಳು ಸಹಿತ ನಾಲ್ಕು ದೋಣಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ






