ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪತಿಯ ಕೊಲೆ
ಗುಡಿಬಂಡೆ: ವೈಯಕ್ತಿಕ ದ್ವೇಷದ ಹಿನ್ನೆಲೆ ಗ್ರಾ.ಪಂ ಉಪಾದ್ಯಕ್ಷರ ಪತಿ ಕೊಲೆಯಾದ ಘಟನೆ ನಗರಗೆರೆ ಹೋಬಳಿ ವ್ಯಾಪ್ತಿಯ ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚೋಳಶೆಟ್ಟಿಹಳ್ಳಿ ಗ್ರಾಮದ ನಿವಾಸಿ ರಾಮಕೃಷ್ಣಪ್ಪ.ಸಿ.ವಿ. (46) ಕೊಲೆಯಾದ ವ್ಯಕ್ತಿ.
ರಾಮಕೃಷ್ಣಪ್ಪ ಎಂಬವರನ್ನು ವೈಯಕ್ತಿಕ ದ್ವೇಷದ ಹಿನ್ನೆಲೆ ಸಂಬಂಧಿಕರಿಂದಲೇ ಕೊಲೆಯಾಗಿದ್ದು, ಘಟನೆ ಗುಡಿಬಂಡೆ ನ್ಯಾಯಾಲಯದ ವ್ಯಾಪ್ತಿಯಲ್ಲಿ ನಡೆದಿದೆ.
ಜಿಕೊತ್ತೂರು ಗ್ರಾಮ ಪಂಚಾಯತ್ ಉಪಾದ್ಯಕ್ಷೆ ರತ್ನಮ್ಮಾವರ ಪತಿ ಮೃತ ದೃದೈವಿಯಾಗಿದ್ದು, ಈತ ಎಂದಿನಂತೆ ಚೋಳಶೆಟ್ಟಿಹಳ್ಳಿ ಗ್ರಾಮದ ಹಾಲು ಡೈರಿಗೆ ಬೆಳಿಗ್ಗೆ ಹಾಲು ಹಾಕಲು ಹೋಗಿದ್ದು, ಈ ಸಮಯದಲ್ಲಿ ಸಂಬಂಧಿಕರಿಂದಲೇ ಮಚ್ಚಿನಿಂದ ತಲೆಗೆ ಹಾಕಿ ಹತ್ಯೆ ಮಾಡಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.