November 21, 2024

ಐಪಿಎಲ್ 17ನೇ ಆವೃತ್ತಿಯ 10 ತಂಡಗಳು ಕೈಬಿಟ್ಟ ಆಟಗಾರರ ಸಂಪೂರ್ಣ ಪಟ್ಟಿ ಬಿಡುಗಡೆ

0

ದುಬೈ: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 17ನೇ ಆವೃತ್ತಿ ಮುಂದಿನ ವರ್ಷದ ಮಾರ್ಚ್ ತಿಂಗಳ ಮಧ್ಯಂತರದಲ್ಲಿ ಶುರುವಾಗಲಿದೆ ಎಂದು ಖ್ಯಾತ ಕ್ರೀಡಾ ವೆಬ್‌ ತಾಣ ಕ್ರಿಕ್‌ಬಜ್‌ ತನ್ನ ವರದಿಯಲ್ಲಿ ತಿಳಿಸಿದೆ. ಈ ಬಾರಿಯ ಆಟಗಾರರ ಹರಾಜು ಪ್ರಕ್ರಿಯೆ ದುಬೈನ ಹವೆನ್‌ ಆಫ್‌ ಎಲೈಟ್ಸ್‌ನಲ್ಲಿ ಡಿಸೆಂಬರ್‌ 19ರಂದು ನಡೆಯಲಿದೆ.

17 ನೇ ಐಪಿಎಲ್ ಆಟಕ್ಕೆ ಇನ್ನೂ ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದ್ದು ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ಸಹ ನಡೆಯಲಿದೆ.

ಇನ್ನು ಈ ಹರಾಜಿಗೂ ಮುನ್ನ ಎಲ್ಲಾ ತಂಡಗಳು ತಮ್ಮ ತಂಡದಲ್ಲಿನ ಆಟಗಾರರನ್ನು ಕೈಬಿಡಲು ನವೆಂಬರ್‌ 26 ಕೊನೆಯ ದಿನಾಂಕ ಎಂದು ಬಿಸಿಸಿಐ ಗಡುವನ್ನೂ ಸಹ ನೀಡಿದೆ. ಹೀಗಾಗಿ ಸದ್ಯ ವಿವಿಧ ತಂಡಗಳು ತಮಗೆ ಯಾವ ಆಟಗಾರರು ಬೇಡವೋ ಅಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ. ಈ ಬಾರಿಯ ಹರಾಜಿಗೂ ಮುನ್ನ ವಿವಿಧ ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

  1. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಹರ್ಷಲ್‌ ಪಟೇಲ್‌, ಹಸರಂಗ, ಫಿನ್ ಅಲೆನ್, ಜೋಶ್ ಹೆಝಲ್ವುಡ್, ಡೇವಿಡ್ ವಿಲ್ಲೆ, ಕೇದರ್ ಜಾದವ್.
  2. ಚೆನ್ನೈ ಸೂಪರ್‌ ಕಿಂಗ್ಸ್:‌ ಬೆನ್ ಸ್ಟೋಕ್ಸ್‌, ಭಗತ್ ವರ್ಮ, ಸೇನಾಪತಿ, ಆಕಾಶ್ ಸಿಂಗ್, ಸಿಸಂದ ಮಗಾಲ.
  3. ಸನ್‌ ರೈಸರ್ಸ್‌ ಹೈದರಾಬಾದ್:‌ ಹ್ಯಾರಿ ಬ್ರೂಕ್ಸ್‌, ಆದಲ್ ರಶೀದ್, ಅಕೇಲ್ ಹುಸೇನ್, ಕಾರ್ತಿಕ್ ತ್ಯಾಗಿ, ಸಮರ್ತ್.
  4. ಡೆಲ್ಲಿ ಕ್ಯಾಪಿಟಲ್ಸ್‌: ಮನೀಶ್‌ ಪಾಂಡೆ, ಫಿಲ್ ಸಾಲ್ಟ್, ರಿಲೆ ರೊಸ್ಸೋ, ಅಮನ್ ಖಾನ್, ನಾಗರ್ಕೊಟಿ, ಸರಫರಾಝ್ ಖಾನ್, ಚೇತನ್ ಸಕಾರಿಯ, ರೋಮನ್ ಪೋವೆಲ್.
  5. ರಾಜಸ್ಥಾನ್‌ ರಾಯಲ್ಸ್:‌ ಜೇಸನ್‌ ಹೋಲ್ಡರ್‌, ಕೆಸಿ ಕಾರಿಯಪ್ಪ, ಮುರುಗನ್‌ ಅಶ್ವಿನ್‌, ಆಸಿಫ್, ಜೋ ರೂಟ್, ಉಬೇದ್ ಮೆಕೊಯ್, ಕುಲ್ದೀಪ್ ಯಾದವ್, ಆಕಾಶ್, ಅಬ್ದುಲ್ ಬಾಸಿತ್.
  6. ಗುಜರಾತ್‌ ಟೈಟನ್ಸ್:‌ ದಸುನ್‌ ಶನಕ, ಯಶ್‌ ದಯಾಳ್‌, ಓಡಿಯನ್‌ ಸ್ಮಿತ್‌, ಪ್ರದೀಪ್ ಸಾಂಗ್ವಾನ್‌, ಉರ್ವಿಲ್‌ ಪಟೇಲ್‌, ಶಿವಂ ಮಾವಿ.
  7. ಕೊಲ್ಕತ್ತಾ ನೈಟ್‌ ರೈಡರ್ಸ್:‌ ಶಕಿಬ್ ಹಸನ್, ಎನ್‌ ಜಗದೀಶನ್‌, ಲಾಕಿ ಫರ್ಗ್ಯೂಸನ್‌, ಡೇವಿಡ್‌ ವೈಸ್‌ ಹಾಗೂ ಮನ್‌ದೀಪ್‌ ಸಿಂಗ್, ಟಿಮ್ ಸೌತಿ.
  8. ಲಕ್ನೋ ಸೂಪರ್‌ಜೈಂಟ್ಸ್: ಜೈದೇವ್ ಉನದ್ಘಟ್, ಮನನ್ ವೋಹ್ರ, ಸ್ವಪ್ನಿಲ್ ಸಿಂಗ್, ಕರಣ್ ನಾಯರ್‌, ಕರಣ್ ಶರ್ಮ.
  9. ಮುಂಬೈ ಇಂಡಿಯನ್ಸ್: ಅರ್ಶಾದ್ ಖಾನ್, ಹ್ರಿತಿಕ್ ಸೋಕೀನ್, ರಮನ್ದೀಪ್ ಸಿಂಗ್, ರಾಗವ್ ಗೋಯಲ್, ಜೋಫ್ರ ಆರ್ಚರ್, ಕ್ರಿಸ್ ಜೋರ್ಡಾನ್.
  10. ಪಂಜಾಬ್‌ ಕಿಂಗ್ಸ್:‌ ಭಾನುಕಾ ರಾಜಪಕ್ಸೆ, ರಾಜ್‌ ಅಂಗದ್‌ ಬಾವಾ, ಶಾರುಖ್ ಖಾನ್, ಬಲ್ತೇಜ್ ಸಿಂಗ್.

Leave a Reply

Your email address will not be published. Required fields are marked *

error: Content is protected !!