ಕಂಬಳ ನೋಡಿ ವಾಪಾಸ್ ಆಗುತ್ತಿದ್ದಾಗ ಬೋರ್ ವೆಲ್-ಕಾರು ನಡುವೆ ಅಪಘಾತ: ಮಂಗಳೂರಿನ ಇಬ್ಬರು ಮೃತ್ಯು
ಮಂಗಳೂರು: ರಾಜ್ಯ ಹೆದ್ದಾರಿ 33 ತಾಲೂಕಿನ ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಬಳಿ ಬೋರ್ ವೆಲ್ ಹಾಗೂ ಕಾರು ನಡುವಿನ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಮೃತರನ್ನು ಬಜಪೆ ಮೂಲದ ಕಿಶಾನ್ ಶೆಟ್ಟಿ( 20 ) ದಕ್ಷಿಣ ಕನ್ನಡ ಜಿಲ್ಲೆ ಭಟ್ಟರ ತೋಟ ಗ್ರಾಮದ ಫಿಲೀಪ್ ನೇರಿ ಲೋಬೋ (32) ಎಂದು ಗುರುತಿಸಲಾಗಿದೆ.
ನಿತೀಶ್ ಭಂಡಾರಿ, ಪ್ರೀತಿ ಲೋಬೋ, ಹರೀಶ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಶನಿವಾರ ನಡೆಯುತ್ತಿದ್ದ ಕಂಬಳವನ್ನು ನೋಡಿಕೊಂಡು ತಮ್ಮ ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೊಗುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಈ ಬಗ್ಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.