ಪುತ್ತೂರು : ತೋಟಕ್ಕೆ ಬಳಸುವ ವಿಷಕಾರಿ ಕೀಟನಾಶಕ ಸೇವಿಸಿದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಸಂಪ್ಯ ಬೈಲಾಡಿ ನಿವಾಸಿ ಮಂಜಪ್ಪ ಗೌಡರ ಪುತ್ರಿ, ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶಾ (17) ಮೃತ ಯುವತಿ.
ಈ ಬಗ್ಗೆ ನಿಶಾ ರವರ ಸಹೋದರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ನಿಶಾ ಬಿ ಎಮ್ ರವರು ಪುತ್ತೂರು ನಗರ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹದಿನೈದು ದಿನಗಳ ಹಿಂದೆ ಬಿಹಾರದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ (ಓಟ ಸ್ಪರ್ಧೆ) ಭಾಗವಹಿಸಿ ಅಲ್ಲಿ ಯಾವುದೇ ಬಹುಮಾನ ದೊರೆಯದೇ ಹಿಂತಿರುಗಿ ಮನೆಗೆ ಬಂದವರು ಬೇಸರದಲ್ಲಿದ್ದು ನ.14 ರಂದು ವಿಪರೀತವಾಗಿ ವಾಂತಿ ಮಾಡುತ್ತಿದ್ದು, ಇದರಿಂದ ಅಸ್ವಸ್ಥಳಾದವಳನ್ನು ಈ ಬಗ್ಗೆ ವಿಚಾರಿಸಿದಾಗ ನ.13 ರಂದು ಸಂಜೆ ತೋಟಕ್ಕೆ ಬೀಡುವ ಕೀಟನಾಶಕವನ್ನು ಸೇವಿಸಿರುವುದಾಗಿ ತಿಳಿಸಿದ್ದು, ನಂತರ ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರಲ್ಲಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು, ನಿಶಾನನ್ನು ಪರೀಕ್ಷಿಸಿ ಒಳ ರೋಗಿಯನ್ನಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ನ.25 ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ನಿಶಾ ಬಿ ಎಮ್ ರವರು ಮೃತಪಟ್ಟಿದ್ದು, ಸದ್ರಿ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ UDR .No: 43/2023 ಕಲo: 174 CRPC ರಂತೆ ಪ್ರಕರಣ ದಾಖಲಾಗಿದೆ.